ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichha Sudeep) ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ (Max) ಸಿನಿಮಾ ಯಾವಾಗ ರಿಲೀಸ್ ಆಗುತ್ತಪ್ಪ ಎಂದು ಕಾದು ಕುಳಿತಿದ್ದ ಫ್ಯಾನ್ಸ್ ಗೆ ಕೊನೆಗೂ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ. ಬಹುನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಇದೇ ವರ್ಷ ರಿಲೀಸ್ ಆಗಲಿದೆ.
ಹೌದು, ಮ್ಯಾಕ್ಸ್ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 2024ರ ಡಿಸೆಂಬರ್ ಕಡೆಯ ವಾರ, 26ರಂದು ಮ್ಯಾಕ್ಸ್ ಬಿಡುಗಡೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಕತ್ ಖುಷಿ ಪಟ್ಟಿದ್ದಾರೆ.
ಇನ್ನು ಕೇವಲ ಒಂದು ವಾರದ ಮುನ್ನ, ಅಂದ್ರೆ ಡಿಸೆಂಬರ್ 20ರಂದು ರಿಯಲ್ ಸ್ಟಾರ್ ಉಪೇಂದ್ರ (Real star upendra) ನಟಿಸಿ ನಿರ್ದೇಶಿಸಿರುವ ಯುಐ (UI) ಚಿತ್ರ ಕೂಡ ತೆರೆಗೆ ಬರುತ್ತಿದೆ. ಇದಾದ ಒಂದು ವಾರದ ಬಳಿಕ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಲಿದೆ.