• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣ ನೃತ್ವದಲ್ಲಿ ಬೃಹತ್ ಪ್ರತಿಭಟನೆ.

Any Mind by Any Mind
November 4, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ವಕ್ಫ್ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ ಚವ್ಹಾಣ ಅವರ ನೇತೃತ್ವದಲ್ಲಿ ಬಿಜೆಪಿ ಔರಾದ(ಬಿ) ಮಂಡಲ ವತಿಯಿಂದ ಔರಾದ್‌ನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಕಾರ್ಯಕರ್ತರು, ರೈತರು ಸೇರಿದಂತೆ ಸಾವಿರಾರು ಜನರೊಂದಿಗೆ ಪಟ್ಟಣದ ಎಪಿಎಂಸಿ ಬಳಿ ಆರಂಭವಾದ ಮೆರವಣಿಗೆ ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮುಲಕ ತಾಲ್ಲೂಕು ಆಡಳಿತ ಸೌಧದ ವರೆಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಶಾಸಕರಾದ ಪ್ರಭು ಚವ್ಹಾಣ ಅವರು ಮಾತನಾಡಿ, ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕೂಡಲೇ ರಾಜೀನಾಮೆ ಕೊಡಬೇಕು.

ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆ ಯಾಚಿಸಬೇಕು ಮತ್ತು ಸ್ಪಷ್ಟನೆ ಕೊಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೇಜಟ್ ನೋಟಿಫಿಕೆಶನ್ ಹಿಂಪಡೆಯಬೇಕು.

ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.ಶಾಂತಿ, ಸಾಮರಸ್ಯದ ನಾಡಾದ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಶಾಂತಿ ಸೃಷ್ಟಿಸಿದೆ. ರೈತರು ಮತ್ತು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಯಾವಾಗ ಯಾರ ಜಮೀನು ಹೋಗುತ್ತದೋ ಎನ್ನುವ ಭಯ ರೈತರನ್ನು ಕಾಡುತ್ತಿದೆ.

ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳು, ಆಸ್ಪತ್ರೆಗಳನ್ನು ಬಿಡದೇ ಎಲ್ಲ ಆಸ್ತಿಗಳನ್ನು ವಕ್ಫ್ ಹೆಸರಿಗೆ ಮಾಡಲಾಗುತ್ತಿದೆ. ಸರ್ಕಾರ ಯಾವಾಗ ಬೇಕಾದರೂ ಯಾರ ಜಮೀನನ್ನು ವಕ್ಫ್ ಹೆಸರಿಗೆ ಮಾಡಬಹುದು. ಹಾಗಾಗಿ ರೈತರು ಕೂಡ ಎಚ್ಚರಿಕೆ ವಹಿಸಬೇಕು. ತಮ್ಮ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.ವಿಜಯಪುರ ಜಿಲ್ಲೆಯಂದರಲ್ಲೇ ರೈತರ 1,500 ಎಕರೆ ಜಮೀನು ಆಸ್ತಿಯೆಂದು ಘೋಷಿಸಲಾಗಿದೆ. ಬೀದರ ಜಿಲ್ಲೆಯಲ್ಲಿಯೂ ಸಾವಿರಾರು ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಲಾಗಿದೆ.

ಔರಾದ ತಾಲ್ಲೂಕಿನ ಎಕಂಬಾ ಹೋಬಳಿಯಲ್ಲಿರುವ ಜಮಾಲಪೂರ ಗ್ರಾಮದಲ್ಲಿ ಮುಸ್ಲಿಮ್ ಮನೆಗಳೇ ಇಲ್ಲ. ಆದರೂ ಅಲ್ಲಿನ ಸರ್ವೇ ನಂ.23ರಲ್ಲಿ ಸುಮಾರು 4 ಎಕರೆ ಭೂಮಿಯನ್ನು ವಕ್ಫ್ ಆಸ್ತಿಯೆಂದು ತಿದ್ದುಪಡಿ ಮಾಡಲಾಗಿದೆ. ಇಂತಹ ಅಕ್ರಮ ಮತ್ತು ಅನ್ಯಾಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.ಇಡೀ ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ರಾಜ್ಯ ಸರ್ಕಾರವು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ.

ನಮ್ಮ ಸರ್ಕಾರವಿದ್ದಾಗ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದೇವೆ. ಆದರೆ ಯಾವುದೇ ರೈತರ ಜಮೀನನ್ನು ಅಕ್ರಮವಾಗಿ ಪಡೆಯುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ.

ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರೆಯಲಿದೆ. ಮತ್ತದೇ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿರು.

Tags: apmcBJPcreated anxiety among farmersDayananda GhuleDhondiba NaroteEira ReddyGovindareddy Kasabehuge protestKeraba.Khandoba Kangateleaders Vasant BiradaraMaheshwar SwamyMandal President Ramshetty PanaleMassive protest led by MLA Prabhu ChavanPradeepa PawarRaitha Morcha District President Shivraj AlmajeRamesh UpaseRangarao JadhavSachin RathoreSanthosh PokalwaraShivajirao Patil MunganalaVaijinath GuddaWaqf Minister Jamir Ahmed KhanZakir Sheikh
Previous Post

ಪೊಲೀಸ್ ಇಲಾಖೆ ಜನಸ್ಮೇಹಿಯಾಗಲಿ:ಶಾಸಕ ಪ್ರಭು ಚವ್ಹಾಣ

Next Post

ಕಣ್ಮನ ಸೆಳೆಯುತ್ತಿದೆ “ರುದ್ರ ಗರುಡ ಪುರಾಣ” ಚಿತ್ರದ “ಕಣ್ಮುಂದೆ ಬಂದು”ಡಿಸೆಂಬರ್ 27 ರಂದು ತೆರೆಗೆ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post

ಕಣ್ಮನ ಸೆಳೆಯುತ್ತಿದೆ "ರುದ್ರ ಗರುಡ ಪುರಾಣ" ಚಿತ್ರದ "ಕಣ್ಮುಂದೆ ಬಂದು"ಡಿಸೆಂಬರ್ 27 ರಂದು ತೆರೆಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada