ಶುಕ್ರವಾರ ಮಧ್ಯಾಹ್ನ ಮುಂಬೈನ ಅಂಧೇರಿಯಲ್ಲಿ ಹಾಕಿದ ಶೂಟಿಂಗ್ ಸಟ್ನಲ್ಲಿ ಬಂಎಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಜ್ವಾಲಾಮುಖಿಯಂತೆ ಹರಡಿರುವುದಾಗಿ ತಿಳಿದು ಬಂದಿದೆ.
ಸಂಜೆ ಸುಮಾರು 4:30ರ ಹೊತ್ತಿಗೆ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್ ಪ್ಕ್ದಲ್ಲಿರುವ ಚಿತ್ರಕೂಟ ಮೈದಾನದಲ್ಲಿ ಹಾಕಿದ ಬೃಹತ್ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.
ಮೊದಮೊದಲು ಬೆಂಕಿಯೂ ಆಪ್ರದೇಶದಲ್ಲಿರುವ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಶಂಕಿಸಿದ್ದರು ಆ ನಂತರ ಅದು ಫಿಲ್ಮ್ ಸೆಟ್ನಲ್ಲಿ ಎಂಬುದು ಖಚಿತಪಡಿಸಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಸಾವು ನೋವು ಸಂಭವಿಸಿರುವ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.