ಕೂದಲೆಳೆ ಅಂತರದಲ್ಲಿ ಪಾರಾದ ಮಾರ್ಟಿನ್(Martin) ಚಿತ್ರತಂಡ ಬಹುದೊಡ್ಡ ಅಪಾಯವೊಂದರಿಂದ ಪಾರಾಗಿದ್ದು, ಪೈಲೆಟ್(Pilot) ಸಮಯಪ್ರಜ್ಞೆಯಿಂದ ನಟ ಧ್ರುವ ಸರ್ಜಾ(Dhruva Sarja) ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಪ್ರಾಣಾಪಾಯದಿಂದ ಬಜಾವ್ ಆಗಿದ್ದಾರೆ.
ಆಕ್ಷನ್ ಪ್ರಿನ್ಸ್(Action Prince) ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಚಿತ್ರೀಕರಣಕ್ಕಾಗಿ ನಟ ಧ್ರುವ ಸರ್ಜಾ ಸೇರಿದಂತೆ ಹಲವರು ಶ್ರೀನಗರ(Srinagar)ಕ್ಕೆ ತೆರಳಿದ್ದರು. ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಚಿತ್ರತಂಡ ಪ್ರಯಾಣಿಸುತ್ತಿದ್ದ ಫ್ಲೈಟ್(Flight) ಕ್ರ್ಯಾಶ್ ಆಗುವ ಸಂಭವವಿತ್ತು ಎನ್ನಲಾಗಿದೆ. ಆದರೆ ಪೈಲಟ್ ಸಮಯಪ್ರಜ್ಞೆಯಿಂದ ಫ್ಲೈಟ್‌ನಲ್ಲಿದ್ದ ಎಲ್ಲರೂ ಬಜಾವ್ ಆಗಿದ್ದಾರೆ.

ಇನ್ನೂ ತಮಗಾದ ಈ ಆಘಾತಕಾರಿ ಅನುಭವದ ಬಗ್ಗೆ ಚಿತ್ರತಂಡ ವಿಡಿಯೋ(Video) ಮೂಲಕ ಹಂಚಿಕೊಂಡಿದ್ದು, “ಇಂದು ಆದಂತಹ ಅನುಭವ ತಮ್ಮ ಜೀವನದಲ್ಲೇ ಆದ ಅತ್ಯಂತ ಕೆಟ್ಟ ಅನುಭವವಾಗಿದ್ದು, ನಾವೆಲ್ಲರೂ ಸೇಫ್(Safe) ಆಗಿದ್ದೇವೆ. ಪೈಲಟ್ಗೆ ಥ್ಯಾಂಕ್ಸ್ ಎಂದು ನಟ ಧ್ರುವ ಸರ್ಜಾ ಹೇಳಿಕೆಕೊಂಡಿದ್ದಾರೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಪ್ರಯಾಣಿಸುತ್ತಿದ್ದ ಫ್ಲೈಟ್ ಕೂಡ ಇದೇ ರೀತಿಯಲ್ಲಿ ಅಪಾಯದಿಂದ ಪಾರಾಗಿತ್ತು. ಈ ಬಗ್ಗೆ ನಟಿ ರಶ್ಮಿಕಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಅನುಭವ ಹಂಚಿಕೊಂಡಿದ್ದರು.
#ActionPrince #DhruvaSarja #MartinMovie #PlaneCrash #Srinagar