ಮೈಸೂರು ನಗರಾಭಿವೃದ್ಧಿ(MUDA)ಮಾಜಿ ಅಧ್ಯಕ್ಷ್ಯ , ಸಿಎಂ ಸಿದ್ದರಾಮಯ್ಯ (Cm siddaramaiah) ಆಪ್ತ ಮರಿಗೌಡ (Mari gowda) ಮುಡಾ ಕೇಸ್ ಸಂಬಂಧ ಇಂದು ED ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ತಿಂಗಳು ತಾವಾಗಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೀಗ ಸಿಎಂ ಸಿದ್ದರಾಮಯ್ಯ ಪರಮಾಪ್ತ ಮತ್ತು ಮುಡಾ ಮಾಜಿ ಅಧ್ಯಕ್ಷ ಮರಿ ಗೌಡಗೆ ED ಸಂಕಷ್ಟ ಎದುರಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮರಿಗೌಡ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದ ಹಿನ್ನಲೆ ಇಂದು ಬೆಂಗಳೂರಿನಲ್ಲಿರುವ ED ಕಚೇರಿಗೆ ಹಾಜರಾಗಿದ್ದಾರೆ.
ಮುಡಾ ಹಗರಣದಲ್ಲಿ ED ಟೀಮ್ ತನಿಖೆ ತೀವ್ರಗೊಳಿಸಿದ್ದು, ಈಗಾಗಲೇ ಈ ಪ್ರಕರಣದಲ್ಲಿ ಹಲವರನ್ನು ED ವಿಚಾರಣೆಗೆ ಒಳಪಡಿಸಿದೆ. ರಾಯಚೂರು ಸಂಸದ ಮತ್ತು ಮೈಸೂರಿನ ಮಾಜಿ DC ಕುಮಾರ್ ನಾಯಕ್ ಅವರನ್ನು ಕೂಡ ED ನಿನ್ನೆ ವಿಚಾರಣೆಗೊಳಪಡಿಸಿತ್ತು. ಹೀಗೆ ವಿಚಾರಣೆ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ಸಿಎಂ ಮತ್ತು ಅವರ ಪತ್ನಿಗೆ ED ನೊಟೀಸ್ ನೀಡುವ ಸಾಧ್ಯತೆ ಇದೆ.