ನವದೆಹಲಿ: ಒಲಿಂಪಿಕ್ ಡಬಲ್ ಪದಕ ವಿಜೇತ ಮನು ಭಾಕರ್ (Manu Bhaker) ಅವರು ಶುಕ್ರವಾರ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪಿಸ್ತೂಲ್ ಶೂಟಿಂಗ್ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಬರೆದ ಮನು ಭಾಕರ್ ಅವರು, ಬುಧವಾರ ಕಾಂಗ್ರೆಸ್ನ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು.ಇದೀಗ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮನು ಭಾಕರ್ ಹಾಗೂ ಅವರ ಕುಟುಂಬದವರಿಗೆ ರಾಹುಲ್ ಗಾಂಧಿ ಅವರು ಸಿಹಿ ಶುಭ ಕೋರಿದ್ದಾರೆ.
Double Olympic medallist Manu Bhaker meets Leader of Opposition @RahulGandhi ji in his office in Parliament House, Delhi. pic.twitter.com/cV8raCWvgQ
— Alok Sharma (@Aloksharmaaicc) August 9, 2024
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮನು ಭಾಕರ್ ಭೇಟಿ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ದೇಶಕ್ಕಾಗಿ ಎರಡು ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ಬರೆದ ಭಾರತದ ಶೂಟರ್ ಮನು ಭಾಕರ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಆಕೆಯ ಅದ್ಭುತ ಪ್ರದರ್ಶನದಿಂದ ಪ್ರತಿಯೊಬ್ಬ ಭಾರತೀಯನೂ ಉತ್ಸುಕನಾಗಿದ್ದಾನೆ. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಬರೆದಿದ್ದಾರೆ.