ಇಂದು ಪ್ರಧಾನಿ ನರೇಂದ್ರ ಮೋದಿ (Pm Narendra modi) ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಉಂಟಾದ ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ಹೀಗಾಗಿ ಇಂದು ಬೆಳಿಗ್ಗೆ ಮೋದಿ ಮೊದಲಿಗೆ ಕಣ್ಣೂರಿಗೆ (Kannur) ಆಗಮಿಸಲಿದ್ದಾರೆ. ವರುಣನ ಅಟ್ಟಹಾಸಕ್ಕೆ ಗುಡ್ಡ ಕುಸಿತವಾಗಿ 350ಕ್ಕೂ ಹೆಚ್ಚು ಜನ ದುರಂತ ಸಾವನ್ನಪ್ಪಿದ್ರು. ನೂರಾರು ಜನ ಸಾವಿನ ಸುಳಿವೂ ಇಲ್ಲದೇ ನಿದ್ರೆಯಲ್ಲದ್ದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.
ಇದೀಗ ಈ ದುರುಂತದ ಹಿನ್ನಲೆ ಮೋದಿ ಕೇರಳಕ್ಕೆ (Kerala) ಭೇಟಿ ನೀಡಿ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸದ್ಯ ಸ್ಥಳದಲ್ಲಿನ ಸಂಪೂರ್ಣ ಮಾಹಿತಿ ಪಡೆದ ನಂತರ ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ನಮೋ ಘೋಷಿಸಲಿದ್ದಾರ ಎಂಬ ನಿರೀಕ್ಷೆ ಮೂಡಿದೆ.