ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರು ನವೆಂಬರ್ 26ರ ಸಂವಿಧಾನ ದಿನದಂದು ಮಂತ್ರ ಮಾಂಗಲ್ಯ ಆಗುವ ಮೂಲಕ ಮಾದರಿಯಾಗಿದ್ದಾರೆ.
ಹೌದು, ಅದ್ಧೂರಿತನ, ವಿಜೃಂಭಣೆ ಮದುವೆಯಾಗುವ ಈ ಕಾಲದಲ್ಲಿ ಸರಳವಾಗಿ, ವೈಚಾರಿಕವಾಗಿ ಉನ್ನತ ಅಧಿಕಾರಿಯೊಬ್ಬರು ನವ ಜೀವನಕ್ಕೆ ಕಾಲಿಡುವ ಮೂಲಕ ಇತರರಿಗೆ ಮಾದರಿ ಹಾಕಿಕೊಟ್ಟಿದ್ದಾರೆ.
ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ಗೀತಾ ಹುಡೇದಾ ಅವರು ಹರೀಶ್ ಕುಮಾರ್ ಜೊತೆ ಮೈಸೂರಿನಲ್ಲಿ ಮಂತ್ರ ಮಾಂಗಲ್ಯದ ಮೂಲಕ ನವಜೀವನಕ್ಕೆ ಕಾಲಿಡುತ್ತಿದ್ದಾರೆ.
ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆ ಮೆರೆದಿದ್ದಾರೆ.
ಪುರೋಹಿತರಿಲ್ಲದೇ, ದುಂದು ವೆಚ್ಚ ಮಾಡದೇ, ವೈಚಾರಿಕವಾಗಿ ಸರಳವಾಗಿ ದಾಂಪತ್ಯಕ್ಕೆ ಕಾಲಿಡುವ ವಿವಾಹ ಪದ್ಧತಿಯನ್ನು ರಾಷ್ಟ್ರಕವಿ ಕುವೆಂಪು ಪ್ರಾರಂಭಿಸಿದರು. ಇದನ್ನು ಯುವ ಪೀಳಿಗೆ ಅಲ್ಲಲ್ಲಿ ಪಾಲಿಸುತ್ತಿದ್ದಾರೂ ಅಷ್ಟು ದೊಡ್ಡ ಮಟ್ಟದಲ್ಲಿ ಅನುಸರಿಸಿಲ್ಲದಿರುವುದು ಕಾಣಬಹುದು. ಆದರೆ ಅಧಿಕಾರಿಗಳ ಇಂತಹ ಮಾದರಿ ನಡೆಯಿಂದ ಈತರದ ಸರಳ ಮದುವೆಗಳು ಹೆಚ್ಚಾಗಲಿ ಎಂಬುದು ಆಶಯ.