
ಮಾಜಿ ಪ್ರಧಾನಿಗಳಾದ ಡಾ ಮನಮೋಹನ್ ಸಿಂಗ್ ಅವರ ಜೀವನ ಮತ್ತು ಅವರ ಬದುಕನ್ನು ನೋಡಿದಾಗ, ಒಂದು ರೀತಿಯ ಪವಾಡವೇ ಆಗಿದೆ ಅಂತಾ ಗೊತ್ತಾಗುತ್ತದೆ. ಅವರು ಬಡ ಕುಟುಂಬದಿಂದ ಬೆಳೆದು ಬಂದವರು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಪಂಜಾಬ್‌ನಲ್ಲಿ ಪದವಿ ಮಾಡಿದ ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿದ್ರು. ಜಗತ್ತಿನ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ. ಬಹಳ ಮೃದು ಸ್ವಭಾವದವರು. ಕಡಿಮೆ ಮಾತಾಡುವವರು. ನಾನು ಅನೇಕ ಸಾರಿ ಇವರನ್ನ ಭೇಟಿ ಮಾಡೋಕೆ ಅವಕಾಶ ಸಿಗ್ತಾಯಿತ್ತು. ಬಹಳ ಗೌರವದಿಂದ ನಡೆದುಕೊಳ್ಳುತ್ತಿದ್ರು. ಚೆನ್ನಾಗಿ ಮಾತನಾಡಿಸ್ತಾಯಿದ್ರು. ನಾವು ಹೇಳುವ ವಿಚಾರಗಳನ್ನು ಸಮಾಧಾನವಾಗಿ ಕೇಳ್ತಾಯಿದ್ರು ಎಂದಿದ್ದಾರೆ.
ನಾವು ಹೇಳುವ ವಿಚಾರಗಳು ಆಗ್ತಾವೋ ಇಲ್ಲೋ ಅನ್ನೋದನ್ನ ನೇರವಾಗಿ ಹೇಳುವ ಸ್ವಭಾವ ಹೊಂದಿದವರಾಗಿದ್ರು ಎಂದಿರುವ ಸಿಎಂ ಸಿದ್ದರಾಮಯ್ಯ, ಹತ್ತು ವರ್ಷಗಳ ಕಾಲ ಪ್ರಧಾನ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ರೈಟ್ ಟು ವರ್ಕ್, ರೈಟು ಎಜುಕೇಶನ್ , ರೈಟು ಇನ್ಪಾರ್ಮೇಶನ್ , ನರೇಗಾ ಯೋಜನೆ, ಫುಡ್ ಸೆಕ್ಯೂರಿಟಿ ಆ್ಯಕ್ಟ್ ಈ ಯೋಜನೆಗಳನ್ನು ಜಾರಿಗೆ ತಂದವರು. ಇದು ದೇಶಕ್ಕೆ ಮಾತ್ರಾ ನಷ್ಟ ಅಲ್ಲ. ಇಡೀ ಜಗತ್ತಿಗೆ, ಆರ್ಥಿಕ ಕ್ಷೇತ್ರಕ್ಕೆ ಆದಂತಹ ನಷ್ಟ ಎಂದಿದ್ದಾರೆ. ರಾಜ್ಯದಲ್ಲಿ 2013-18 ರಲ್ಲಿ ನಮ್ಮ ಸರ್ಕಾರ ಇತ್ತು. ಕರ್ನಾಟಕದ ಆರ್ಥಿಕತೆ ಬಹಳ ಚೆನ್ನಾಗಿದೆ ಎಂದು ಹೇಳಿದ್ರು ಅಂತಾನೂ ಹೇಳಿದ್ದಾರೆ.
ಇನ್ನು ನಾನು ಬದುಕಿದಾಗ ಅಷ್ಟೊಂದು ಪ್ರಚಾರ ಸಿಗುವುದಿಲ್ಲ ಎಂದು ಮನಮೋಹನ್ ಸಿಂಗ್ ಅವರು ಹೇಳಿದ್ರು. ಆದರೆ ನಾನು ಸತ್ತ ಮೇಲೆ ಮಾಧ್ಯಮದವರು ಹೆಚ್ಚು ಪ್ರಚಾರ ಮಾಡ್ತಾರೆ ಅಂತಾನೂ ಹೇಳಿದ್ರು. ಅದು ಇವತ್ತು ಸತ್ಯ ಆಗ್ತಾಯಿದೆ. ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವಂತ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.
ಡಿಸಿಎಂ ಡಿಕೆಶಿವಕುಮಾರ್ ಮಾತನಾಡಿ, ಮನಮೋಹನ್ ಸಿಂಗ್ ಅವರು ಯಾವುದಾದ್ರು ಕಾರ್ಯಕ್ರಮ ಕೊಟ್ಟಿದ್ರೆ. ಎಲ್ಲವು ಶಾಸನ ಬದ್ದವಾಗಿ ಕೊಟ್ಟಿದ್ದಾರೆ. ಫಾರೆಸ್ಟ್ ರೈಟ್ ಆಕ್ಟ್ ಜಾರಿಗೆ ತಂದ್ರು. ಉದ್ಯೋಗ ಖಾತ್ರಿ ಯೋಜನೆಯನ್ನು ಕೊಟ್ಟಿದ್ದು ಅವರ ಹೃದಯ ಶ್ರೀಮಂತಿಕೆ. ಬೆಂಗಳೂರು ಯುನಿವರ್ಸಿಟಿಯಲ್ಲಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ಎಂಬ ವಿಷಯದ ಅಧ್ಯಯನ ಪ್ರಾರಂಭಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್‌ಗೆ ಮನವಿ ಮಾಡಿಕೊಂಡಿದ್ದಾರೆ.