ಮಂಡ್ಯದಲ್ಲಿ (Mandya) ರೈತರ ಮಕ್ಕಳ ಹಾಗೂ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಮುಂದಾಗಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮಂಡ್ಯ ಟೂ ಇಂಡಿಯಾ (mandya to India) ಘೋಷದೊಂದಿಗೆ ಇಂದು ಮತ್ತು ನಾಳೆ, ಅಂದ್ರೆ ಅಕ್ಟೋಬರ್ 18,19 ರಂದು ಬೃಹತ್ ಉದ್ಯೋಗ ಮೇಳೆ ಆಯೋಜಿಸಲಾಗಿದೆ. ಈಗಾಗಲೇ ಕುಮಾರಸ್ವಾಮಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದಾರೆ. ಉದ್ಯೋಗ ಮೇಳದಲ್ಲಿ ದೇಶದ 100 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿದ್ದು, ಈಗಾಗಲೇ 3000 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ನೊಂದಣಿ ಮಾಡಿದ್ದಾರೆ.
ಮಂಡ್ಯದ ಲೋಕಸಭಾ ಚುನಾವಣೆ (mandya mp election) ಸಂದರ್ಭದಲ್ಲಿ ಕುಮಾರಸ್ವಅಮಿ ಮಂಡ್ಯದ ಯುವಕರಿಗೆ ಉದ್ಯೋಗದ ಭರವಸೆ ನೀಡಿದ್ದರು. ಅದೇ ಅಂಶವನ್ನು ಮುಮದಿಟ್ಟುಕೊಂಡು ಸಚಿವ ಚಲುವರಾಯಸ್ವಾಮಿ (Cheluvaraya swamy) ನಮ್ಮ ಯುವಕರಿಗೆ ಕಲಸ ಕೊಡಿಸಿ ಎಂದು ಟೀಕಿಸಿದ್ದರು. ಇದೀಗ ಈ ಉದ್ಯೋಗ ಮೇಳದ ಮೂಲಕ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.