ರಾಜ್ಯದಲ್ಲಿ ಮೂರೂ ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾಣೆಯ ದಿನಾಂಕ ಘೋಷಣೆಯಾಗಿದ್ದು, ಈ ಪೈಕಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ (channapattana ) ಉಪ-ಚುನಾವಣ ವಿಚಾರವಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (Cp yogeshwar) ನಡೆ ಕುತೂಹಲಕ್ಕೆ ಕಾರಣವಾಗಿದೆ.

ಹೀಗಾಗಿ ಈ ಬಗ್ಗೆ ಸಿಪಿವೈ ಗೆ ಬಿಜೆಪಿ ಹೈಕಮಾಂಡ್ (Bjp highcommand) ಸೂಚನೆ ರವಾನಿಸಿದೆ ಎನ್ನಲಾಗ್ತಿದೆ. ನೀವು ಈಗಾಗಲೇ 5 ಬಾರಿ ಶಾಸಕರಾಗಿದ್ದೀರಿ, ಈಗ ಪರಿಸ್ಥಿತಿ ಬೇರೆ ಇದೆ. ಕುಮಾರಸ್ವಾಮಿಯವರ (Kumaraswamy) ಜೊತೆಗೆ ಚರ್ಚಿಸಿ ಮುಂದಿನ ಹೆಜ್ಜೆಯಿಡಿ ಎಂದು ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರಿಯ ಬಿಜೆಪಿ ಮುಖಂಡ B.L.ಸಂತೋಷ್ (BL Santosh) ಆದಿಯಾಗಿ ಅನೇಕ ನಾಯಕರು ಸಿಪಿವೈ ಗೆ ಇದೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈಗಿನ ನಿಮ್ಮ ನಡೆ 2028ರ ಚುನಾವಣೆಗೆ ಅಡಿಗಲ್ಲು ಆಗಬೇಕಿದೆ. ಹೀಗಾಗಿ ಗೊಂದಲ ಮಾಡಿಕೊಳ್ಳಬೇಡಿ. ಪಕ್ಷೇತರರಾಗಿ ಕಣಕ್ಕಿಳಿದ್ರೆ, ವಿಧಾನಪರಿಷತ್ ಸದಸ್ಯ ಸ್ಥಾನ ಕೈತಪ್ಪುತ್ತೆ. ಎಚ್ಚರಿಕೆ ಹೆಜ್ಜೆಯಿಡಿ ಎಂದು ಸೂಚಿಸಲಾಗಿದ್ಯಂತೆ.