ಶಸ್ತ್ರಚಿಕಿತ್ಸೆ(surgery) ನಂತರ ಚೇತರಿಸಿಕೊಂಡ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಇಂದು ಸುದ್ದಿಗೋಷ್ಠಿ ಕರೆದಿದ್ದರು. ಹಾಸನ (Hassan) ಬಿಟ್ಟು ಉಳಿದ ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿರದ ಹಿನ್ನಲೆ , ಆದಷ್ಟು ಬೇಗ ಅಭ್ಯರ್ಥಿಗಳನ್ನು ಫೈನಲ್ ಮಾಡೋದಾಗಿ ಹೇಳಿದ ಹೆಚ್.ಡಿ.ಕೆ (HDK) ಮಂಡ್ಯ ಕ್ಷೇತ್ರದಿಂದ ತಾವೇ ಅಖಾಡಕ್ಕಿಳಿಯೋ ಮಹತ್ವದ ಸುಳಿವು ನೀಡಿದ್ದಾರೆ.

ಮೊದಲಿಗೆ ಹಾಸನ ಕ್ಷೇತ್ರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ (Kumaraswamy), ಹಾಸನದಿಂದ ಪ್ರಜ್ವಲ್ (Prajwal revanna) ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ದೇವೇಗೌಡರೆ(Devegowdaru) ಅದನ್ನ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ರು. ಇನ್ನು ಕೋಲಾರ (Kolar) ಕ್ಷೇತ್ರಕ್ಕೆ ೩ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು , ಸಮೃದ್ಧಿ ಮಂಜುನಾಥ , ನಿಸರ್ಗ ನಾರಾಯಣ ಸ್ವಾಮಿ , ಮಲ್ಲೇಶ್ ಬಾಬು ಹೆಸರು ರೇಸ್ ನಲ್ಲಿದ್ದು ಅಂತಿಮವಾಗಿ ಒಂದು ಹೆಸರನ್ನು ಘೋಷಣೆ ಮಾಡ್ತಿನ್ವಿ ಅಂತ ಹೇಳಿದ್ರು.

ಮಂಡ್ಯ ಬಗ್ಗೆ ಕೊನೆಯದಾಗಿ ಮಾತನಾಡಿದ ಹೆಚ್.ಡಿ.ಕೆ (HDK) ರಾಮನಗರ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ, ಆದ್ರೆ ಮಂಡ್ಯ ಜನರ ಋಣ ಕೂಡ ನನ್ನ ಮೇಲಿದೆ. ನಾನು ಮುಖ್ಯಮಂತ್ರಿಯಾಗಲು ಮಂಡ್ಯ ಜನತೆ ೭ ಶಾಸಕ ಸ್ಥಾನವನ್ನು ನಮಗೆ ನೀಡಿದ್ದರು , ಹಾಗಾಗಿ ಅಹ್ ಋಣವನ್ನು ತೀರಿಸಬೇಕಿದೆ ಎಂದು ಹೇಳುವ ಮೂಲಕ ಮಂಡ್ಯದಿಂದ ತಾವೇ ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಟ್ಟಿದ್ದಾರೆ.