ಮಂಡ್ಯದವರು ಛತ್ರಿಗಳು ಎಂಬ ಡಿಸಿಎಂ ಡಿಕೆಶಿ (Dk shivakumar) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆಶಿ ವಿರುದ್ದ ಮಂಡ್ಯದಲ್ಲಿಂದು (Mandya) ರೈತರು ಛತ್ರಿ ಚಳವಳಿ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಛತ್ರಿಗಳನ್ನು (Umbrella) ಹಿಡಿದು ರೈತರು, ಮಂಡ್ಯದ ಜನರು ರಸ್ತೆಗಿಳಿದಿದ್ದಾರೆ.ಈ ಕುರಿತು ರೈತ ಸಂಘ ಏಕೀಕರಣದ ವತಿಯಿಂದ ಚಳವಳಿಗೆ ಕರೆ ನೀಡಲಾಗಿತ್ತು.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದ್ದು, ಎಚ್ಚರಿಕೆ ನೀಡದ್ರೂ ಕ್ಷಮೇ ಕೋರದ ಡಿಕೆಶಿ ವಿರುದ್ದ ಮಂಡ್ಯ ಜನ ಸಿಡಿದೆದ್ದಿದ್ದಾರೆ.ಹೀಗಾಗಿ ಇಂದು ಇಂದು ಛತ್ರಿ ಚಳವಳಿ ಮೂಲಕ ಬಿಸಿ ಮುಟ್ಟಿಸಲು ತೀರ್ಮಾನ ಮಾಡಿದ್ದಾರೆ.
ಇನ್ನು ಛತ್ರಿ ಮೇಲೆ ಡಿಕೆಶಿ ಪೋಟೋ ಹಾಕಿ ತಿರುಗೇಟು ನೀಡಲು ಜನ ಮುಂದಾಗಿದ್ದು, ತಮ್ಮ ಹೇಳಿಕೆಯ ಕುರಿತು ಕ್ಷಮೆ ಕೇಳುವ ತನಕ ಈ ಹೋರಾಟವನ್ನು ಹಿಂಪಡೆಯಲ್ಲ ಎನ್ನುತ್ತಿರುವ ರೈತರು,ಡಿಕೆ ಶಿವಕುಮಾರ್ ಜಿಲ್ಲೆಗೆ ಬಂದ್ರೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ರವಾನಿಸಿದ್ದಾರೆ.