ಇಂದು ಈದ್ ಮಿಲಾದ್ ಆಚರಣೆ ಹಿನ್ನಲೆಯಲ್ಲಿ ಗಲಭೆಯ ನಂತರ ಸದ್ಯ ತಣ್ಣಗಾಗಿರುವ ಮಂಡ್ಯದ ನಾಗಮಂಗಲದಲ್ಲಿ (mandya nagamangala) ಪೊಲೀಸ್ರು ಹೈ ಅಲರ್ಟ್ ಆಗಿದ್ದಾರೆ. ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ.
ಈದ್ ಮಿಲಾದದ ಮೆರವಣಿಗೆಯಲ್ಲಿ ಗಲಾಟೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ನಾಗಮಂಗಲದ ಗಲ್ಲಿ ಗಲ್ಲಿಗಳಲ್ಲೂ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಹೀಗಾಗಿ ಮಂಡ್ಯ ಸರ್ಕಲ್, ಈದ್ದಾ ಮೈದಾನದ ಸುತ್ತಲೂ 2 ಎಸ್‌ಪಿ, 2 ಎಎಸ್ಪಿ, 4 ಡಿವೈಎಸ್ಪಿ, 20 ಕ್ಕೂ ಹೆಚ್ಚು ಇನ್ಸ್ ಪೆಕ್ಟರ್, 20 ಹೆಚ್ಚು ಪಿಎಸ್‌ಐ ಭದ್ರತೆ,ತಲಾ 7DAR, KSRP ಸೇರಿದಂತೆ 700 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.





