ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಿ.ಸಿ ರೊಡ್ (B C road) ಇಂದು ಪ್ರಕ್ಷುಬ್ಧಗೊಂಡಿದೆ. ಹಿಂದೂ ಮುಖಂಡರು (Hindu leaders) ಮತ್ತು ಮುಸ್ಲಿಂ ಮುಖಂಡರ (Muslim leaders) ಮಧ್ಯೆ ವಾಗ್ಯುದ್ಧ ವಿಕೋಪಕ್ಕೆ ತಿರುಗಿ ಇಂದು ಹಿಂದೂಪರ ಸಂಘಟನೆಗಳಾದ ವಿಹೆಚ್ಪಿ (VHP) ಮತ್ತು ಭಜರಂಗದಳ (Bharamga dal) ಬಿ.ಸಿ ರೋಡ್ ಚಲೋಗೆ ಕರೆ ಕೊಟ್ಟಿತ್ತು.
ಮಂಡ್ಯದ ನಾಗಮಂಗಲದಲ್ಲಿ (Nagamangala) ನಡೆದ ಗಲಭೆ ಹಿನ್ನಲೆ, ಮಂಗಳೂರಿನಲ್ಲಿ ಇದ್ ಮಿಲಾದ್ ಮೆರವಣಿಗೆ ಮಾಡಲು ಅವಕಾಶ ನೀಡಬಾರದ್ದು ಎಂದು ಒತ್ತಾಯಿಸಿದ್ದರು. ಹೀಗಾಗಿ ಧಮ್ ಇದ್ರೆ ಈದ್ ಮಿಲಾದ್ ಮೆರವಣಿಗೆ ತಡೀರಿ ಅಂತ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಸವಾಲು ಹಾಕಿದ್ದ.
ಈ ಸವಾಲನ್ನು ಸ್ವೀಕರಿಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕೇಸರಿ ಶಾಲೂ ಧರಿಸಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ಪೋಲಿಸರು ಕೂಡ ನಿಯೋಜನೆಗೊಂಡಿದ್ದರು. ಈದ್ ಮಿಲಾದ್ ಮೆರವಣಿಗೆ ಸಾಗುವ ಮಾರ್ಗಕ್ಕೆ ಕಾರ್ಯಕರ್ತರು ನುಗ್ಗದಂತೆ ಪೋಲಿಸರು ತಡೆಯಲು ಹರ ಸಹಾಸ ಪಟ್ಟಿದ್ದರಿ.
ಈ ವೇಳೆ ಮುಸ್ಲಿಂ ಮುಖಂಡ ಶರೀಫ್ ಗೆ ಸಾವಾಲು ಹಾಕಿದ ವಿಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್ (Sharan pumpwel), ಹಿಂದೂ ಸಮಾಜ ನಿನ್ನ ಸವಾಲನ್ನು ಸ್ವೀಕರಿಸಿದೆ. ನಿನಗೆ ತಾಕತ್ತಿದ್ದರೆ ನೀನು ಇಲ್ಲಿಗೆ ಬಾ ಎಂದು ಪ್ರತಿ ಸವಾಲು ಹಾಕಿದ್ದಾರೆ.