
ಸಕ್ಕರೆನಾಡ ‘ಲೋಕ’ ಅಖಾಡ ರಂಗೇರಿದೆ. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಹಾಗೂ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ನಡುವೆ ನೇರಾನೇರ ಹಣಾಹಣಿ ಇದೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಬುಧವಾರ ಕುಮಾರಸ್ವಾಮಿ ದೊಡ್ಡ ರೋಡ್ ಶೋ ನಡೆಸಿದ್ರು.ದೊಡ್ಡ ಜನಸಾಗರವೇ ಹರಿದುಬಂದಿತ್ತು.ಬಹಿರಂಗ ಪ್ರಚಾರ ಉದ್ದೇಶಿಸಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಭಾಷಣ ಮಾಡಿದ್ರು.ಈ ಬಾರಿ ಹಣಬಲ-ಜನಬಲದ ಚುನಾವಣೆ.ಕುಮಾರಸ್ವಾಮಿ ಸೋಲಿಸಲು ಕುಂತ್ರಂತ್ರ ಮಾಡಿದ್ದೇವೆ ಎಂದಿದ್ದಾರೆ.ಆದ್ರೆ ದುರಂತದ ಮಾತುಗಳಿಗೆ ಜನರೇ ಉತ್ತರ ಕೊಡ್ತಿದ್ದಾರೆ.ಕುಮಾರಸ್ಚಾಮಿ ಸೋಲಿಸಲು ಅವರ ಕೈಯಲ್ಲಿ ಸಾಧ್ಯವಿಲ್ಲ.ಜಿಲ್ಲೆ ಜನರನ್ನ ಪ್ರೀತಿಯಿಂದ ಗೆಲ್ಲಬಹುದು.ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ.
ಮಂಡ್ಯದ ಏಳು ವಿಧಾನಸಭಾ ಕ್ಷೇದ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ.ಜಿಲ್ಲೆಗೆ ನನ್ನ ಕೊಡುಗೆ ಏನು ಅಂತಾ ಕೇಳ್ತೀರಾ.ಆದ್ರೆ ಕಾಂಗ್ರೆಸ್ ಜಿಲ್ಲೆಗೆ ಕೊಟ್ಟ ಕೊಡುಗೆ ಏನು?
ಭತ್ತ ಬೆಳೆಯಬೇಡಿ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ.ಯಾವ ಬೆಳೆ ಪರಿಹಾರ ಕೊಟ್ಟಿದ್ದೀರಾ.ಈ ಹಿಂದೆ 200 ರೈತರು ಆತ್ಮಹತ್ಯೆ ಮಾಡಿಕೊಂಡ್ರು.
ನಿಮ್ಮದೆ ಸರ್ಕಾರ ಇದ್ದರು ಒಂದು ಮನೆಗೂ ತೆರಳಿ ಸಾಂತ್ವಾನ ಹೇಳಲಿಲ್ಲ.ಆದ್ರೆ ನಾನು ಸರ್ಕಾರವಿಲ್ಲದಿದ್ದರೂ ನೊಂದ ರೈತ ಕುಟುಂಬಕ್ಕೆ ನೆರವಾದೆ ಎಂದರು.

2018ರ ಚುನಾವಣೆಯಲ್ಲಿ ಜೆಡಿಎಸ್ ಅನ್ನ ಬಿಜೆಪಿ ಬಿ ಟೀಂ ಅಂದ್ರೀ.ಕೊನೆಗೆ ನಮ್ಮ ಮನೆ ಬಾಗಿಲಿಗೆ ಬಂದ್ರಿ.ದೇವೇಗೌಡ್ರು ಮಲ್ಲಿಕಾರ್ಜುನ್ ಖರ್ಗೆಯನ್ನ ಮುಖ್ಯಮಂತ್ರಿ ಮಾಡಿ ಅಂದ್ರು.
ಕಾಂಗ್ರೆಸ್ ನಾಯಕರು ಬಲವಂತಾವಾಗಿ ನನಗೆ ಮುಖ್ಯಮಂತ್ರಿ ಪಟ್ಟ ಕಟ್ಟುದ್ರಿ. ಕೊನೆಗೆ ಕಿರುಕುಳ ಕೊಟ್ರಿ.ಆದ್ರೂ 25 ಸಾವಿರ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಿದೆ.ರಾಜ್ಯ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ.20, 50 ರೂ ಛಾಪ ಕಾಗದ ಎಷ್ಟಾಗಿದೆ.
ರೈತರು ಟಿಸಿ ಹಾಕಿಸಲು ಎಷ್ಟು ಹಣ ಮಾಡಿದ್ದಾರೆ.ದಲಿತರ ಎಸ್ಸಿಪಿ ಹಣಕ್ಕೂ ಟೋಪಿ ಹಾಕಿದ್ದಾರೆ ಅಂತ
ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ರು.ಕಾವೇರಿಯ ಮೇಕೆದಾಟು, ಮಹಾದಾಯಿ ವಿಚಾರದಲ್ಲಿ ಐದು ವರ್ಷದಲ್ಲಿ ನ್ಯಾಯ ಕೊಡಿಸುತ್ತೇನೆ. ಯಶಸ್ವಿಯಾಗದಿದ್ದರೇ ಮುಂದೆಂದೂ ವೋಟ್ ಕೇಳಲು ಬರಲ್ಲ.ರಾಮನಗರ ರಾಜಕೀಯ ಶಕ್ತಿ, ರಾಜ್ಯದಲ್ಲಿ ಗುರುತಿಸುವ ಶಕ್ತಿ ಕೊಟ್ಟಿದ್ದು ಮಂಡ್ಯ ಜಿಲ್ಲೆ.
ನಿಮ್ಮ ಮನೆಯ ಮಗನಾಗಿ ಕೆಲಸ ಮಾಡ್ತೇನೆ.ರಾಜ್ಯದ ಜನರ ಬದುಕು ಸರಿಪಡಿಸುವ ಅವಕಾಶವನ್ನ ನನಗೆ ಕಲ್ಪಿಸಿಕೊಡಿ ಅಂತ ಕುಮಾರಸ್ವಾಮಿ ಕೇಳಿಕೊಂಡರು.






