ಮಂಡ್ಯ ರಾಜಕಾರಣ ಅಂದ್ರೆ ಹಾಗೆ..! ರಾಜ್ಯ ರಾಜಕಾರಣದಲ್ಲಿ ಆಗಿಂದಾಗೆ ಮಂಡ್ಯ ರಾಜಕಾರಣ ಸದ್ದು ಮಾಡುತ್ತಲೇ ಇರುತ್ತದೆ.ಇದೀಗ ಮಂಡ್ಯದಲ್ಲಿ ಮತ್ತೆ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. ಯೆಸ್, ಮಾಜಿ ದೋಸ್ತಿಗಳ ನಡುವೆ ಟಾಕ್ ಫೈಟ್ ಬಳಿಕ ಈಗ ಮತ್ತೊಂದು ವಾರ್ ಶುರುವಾಗಿದೆ.
ಮಂಡ್ಯದಲ್ಲಿ ಈಗ ಹೆದ್ದಾರಿ ಕಾಮಗಾರಿಯ ಕ್ರೆಡಿಟ್ ಪಡೆಯಲು ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರ ಕಾಳಗ ಶೂರಿವಾಗಿದೆ.ಒಂದೇ ಕಾಮಗಾರಿ ಎರಡೆರಡು ಬಾರಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ.

ಈ ಹಿಂದೆ ಕುಮಾರಸ್ವಾಮಿ ಪೂಜೆ ನೆರವೇರಿಸಿದ್ದ ಕಾಮಗಾರಿಗೆ, ಈಗ ಮತ್ತೊಮ್ಮೆ ಚಲುವರಾಯಸ್ವಾಮಿ ಪೂಜೆ ನೆರವೇರಿಸಿದ್ದಾರೆ.ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಚಾರವಾಗಿ ಈ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿರೋದು. ಶ್ರೀರಂಗಪಟ್ಟಣದ ಕಿರಂಗೂರಿನಿಂದ ಪಾಂಡವಪುರ ತಾಲ್ಲೂಕಿನ ಬನಘಟ್ಟದವರೆಗೆ 12 ಕಿಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಇದಾಗಿದೆ.

ಸುಮಾರು ಕೋಟಿ ವೆಚ್ಚದಲ್ಲಿ 4 ಪಥದ ಹೆದ್ದಾರಿ ಕಾಮಗಾರಿಗೆ ಎರಡೆರಡು ಬಾರಿ ಗುದ್ದಲಿ ಪೂಜೆ ಮಾಡಲಾಗಿದೆ.ಅಕ್ಟೋಬರ್ 20ರಂದು ಕೇಂದ್ರ ಸಚಿವ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ರು. ಅದೇ ಕಾಮಗಾರಿಗೆ ನಿನ್ನೆ ಸಚಿವ ಚಲುವರಾಯಸ್ವಾಮಿ ಮತ್ತೊಮ್ಮೆ ಪೂಜೆ ಸಲ್ಲಿಸಿದ್ದಾರೆ.
ಹೀಗೆ ಪ್ರತ್ಯೇಕವಾಗಿ ಪೂಜೆ ಸಲ್ಲಿಸುವ ಮೂಲಕ ಕ್ರೆಡಿಟ್ ಪಡೆಯಲು ಕೇಂದ್ರ ಮತ್ತು ರಾಜ್ಯ ಸಚಿವರು ಕಸರತ್ತು ನಡೆಸುತ್ತಿದ್ದಾರೆ. ತನ್ನಿಂದ ಹೆದ್ದಾರಿ ಅಭಿವೃದ್ಧಿಯಾಗುತ್ತಿದೆ ಎಂದು ಬಿಂಬಿಸಿಕೊಳ್ಳಲು ಇಬ್ಬರೂ ನಾಯಕರು ಯತ್ನಿಸುತ್ತಿದ್ದಾರೆ.






