ಮಂಡ್ಯ: ಮಂಡ್ಯ ಭದ್ರಕೋಟೆ ಅಂತೀರಾ. ಭದ್ರಕೋಟೆಗೆ ಏನು ಮಾಡಿದ್ದೀರಾ.!? ಅಕ್ಕ ಪಕ್ಕದ ಜಿಲ್ಲೆ ಸ್ಪಲ್ಪ ಆದರೂ ಅಭಿವೃದ್ಧಿ ಆಗುತ್ತೆ ಮಂಡ್ಯ ಯಾಕೆ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರು, ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, 7 ಜನ ಶಾಸಕರು, ಮೂವರು ಸಚಿವರಿದ್ರಿ. ಇಷ್ಟು ಪವರ್ ಇಟ್ಟುಕೊಂಡು ಏನ್ ಉದ್ದಾರ ಮಾಡಿದ್ದೀರಾ.!? ಎಂದು ಹರಿಹಾಯ್ದರು.
ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟ ಮಾಡಿದ್ದೀನಿ. ಕನ್ನಂಬಾಡಿ ಕಟ್ಟೆ ಇಲ್ಲ ಅಂದ್ರೆ ಇಡೀ ಮಂಡ್ಯ ಇಲ್ಲ.ಮಹಾರಾಜರು ಕಟ್ಟಿಕೊಟ್ಟ ಕೆ.ಆರ್.ಎಸ್ ಡ್ಯಾಂ ನಿಂದಲೆ ಮಂಡ್ಯ ಇರೋದು. ಕೆಆರ್‌ಎಸ್ ಡ್ಯಾಂ ಬಿರುಕು ಕಾಣಿಸಿದೆ ಅಂದಾಗ ಟೀಕೆ ಮಾಡಿದ್ರು. ಅದನ್ನ ಕಾಪಾಡುವ ಕೆಲಸ ನಾವು ಮಾಡಬೇಕಲ್ವ. ಬರೀ ರಾಜಕಾರಣ ಬೇಡ ಜನರಿಗೆ ಏನಾದರೂ ಮಾಡೋಣ. ನಿಮಗೆ ಅಭಿವೃದ್ಧಿ ಬೇಡ, ರಾಜಕಾರಣ ಸಾಕು, ನಿಮಗೆ ನಿಮ್ಮ ಮನೆಯವರಿಗೆ ಒಳ್ಳೆ ಸ್ಥಾನ ಮಾನ ಇದೆ. ಆದರೆ ನಮ್ಮ ಜನರಿಗೆ ಏನಿದೆ ಎಂದು ಕಿಡಿಕಾರಿದರು.
ತಾವು ಲೋಕಸಭಾ ಸದಸ್ಯರಾದ ಬಳಿಕ ಕ್ಷೇತ್ರಕ್ಕೆ ತಂದ ಅನುದಾನ, ಯೋಜನೆ ಪಟ್ಟಿಗಳ ವಿವರವನ್ನು ನೀಡಿದರು. ಪ್ಲೈ ವಾಕ್, ಎಕ್ಸಲೇಟರ್ ಆಗ್ತಿದೆ. ಮಹಾವೀರ ವೃತ್ತದ ಬಳಿಯಿಂದ ಪೇಟೆ ಬೀದಿ ಮಾರ್ಗದಲ್ಲಿ ರೈಲ್ವೆ ಕೆಳ ಸೇತುವೆ. ಅದರ ಅಪ್ರುವಲ್ ಗೆ ಎಷ್ಟು ಕಷ್ಟ ಪಟ್ಟೆ ಅಂತಾ ನನಗೆ ಗೊತ್ತು, ನನ್ನ ಸಿಬ್ಬಂದಿಗೆ ಗೊತ್ತು. ನಾಳೆ ಬೆಳಿಗ್ಗೆ ಬೇಕಿದ್ರು ಇದನ್ನ ನಾನೇ ಮಾಡಿಸಿದ್ದು ಅಂತಾ ಬರ್ತಾರೆ ಎಂದು ಜೆಡಿಎಸ್ ಶಾಸಕರ ವಿರುದ್ದ ಸುದ್ದಿಗೋಷ್ಠಿಯುದ್ದಕ್ಕು ವಾಗ್ದಾಳಿ ನಡೆಸಿದರು.
ಇದು ನನ್ನ ಭವಿಷ್ಯ ಅಲ್ಲ, ಇದು ಮಂಡ್ಯ ಜಿಲ್ಲೆ ಅಭಿವೃದ್ಧಿ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ನನ್ನ ಭವಿಷ್ಯ ಹೇಗಿರುತ್ತೆ ಆತಂಕ ಕಾಡಬಹುದು. ಆದರೆ ನನಗೆ ಅದ್ಯಾವ ಯೋಚನೆಯೂ ಇಲ್ಲ ಎಂದರು.
ನನ್ನ ಚುನಾವಣೆಯಲ್ಲಿ ಕೈ ಹಿಡಿದವರನ್ನು ನಾನು ಮರೆಯಲ್ಲ. ನನ್ನ ಜೊತೆ ಇರಲಿ ಇರದಿರಲಿ ನಾನು ಮರೆಯಲ್ಲ. ನಾನು ದ್ವೇಷದ ರಾಜಕಾರಣ ಮಾಡಲ್ಲ.ನಾನು ಯಾರನ್ನು ದ್ವೇಷಿಸುವುದಿಲ್ಲ.ಬದಲಾವಣೆ ಬಯಸಿದ ನನಗೆ ಇನ್ನಷ್ಟು ಶಕ್ತಿ ಅವಶ್ಯಕ ಎಂದು ಹೇಳಿದರು.
ಅಭಿಷೇಕ್ ಅಂಬರೀಶ್’ಗೆ ಟಿಕೆಟ್ ಕೇಳಿಲ್ಲ.
ನಾನು ಕುಟುಂಬ ರಾಜಕಾರಣ ಮಾಡಲ್ಲ. ಚಾಮುಂಡಿ ತಾಯಿ ಆಣೆಗೂ ಅಭಿಷೇಕ್ ಅಂಬರೀಶ್ ಗೆ ಟಿಕೆಟ್ ಕೇಳಿಲ್ಲ. ನಾನು ರಾಜಕಾರಣದಲ್ಲಿ ಇರುವವರೆಗು ಅಭಿಷೇಕ್ ರಾಜಕಾರಣಕ್ಕೆ ಹೆಜ್ಜೆ ಇಡಲ್ಲ ಎಂದು ಸ್ಪಷ್ಟಪಡಿಸಿದರು.
ಅಭಿಷೇಕ್ ಅಂಬರೀಶ್ ಗೆ ಟಿಕೆಟ್ ಕೊಡಲು ಎರಡು ಪಕ್ಷದಿಂದ ಆಫರ್ ಬಂದಿತ್ತು. ಅಭಿಷೇಕ್ ನಮ್ಮ ತಾಯಿ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಇವಾಗ ನಾನು ರಾಜಕೀಯಕ್ಕೆ ಬರೋದು ಬೇಡ ಅಂದ್ರು. ಅಭಿಷೇಕ್ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗುತ್ತೆ. ಸದ್ಯಕ್ಕೆ ಅವನು ಈ ವರ್ಷ ಮದುವೆ ಆಗ್ತಿದ್ದಾನೆ. ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯುತ್ತಾನೆ ಎಂದು ತಿಳಿಸಿದರು.
ಪ್ರತಾಪ್ ಸಿಂಹ, ಸುಮಲತಾ ನಡುವೆ ಟಾಕ್ ಫೈಟ್: ಸವಾಲಾಗಿ ಸ್ವೀಕರಿಸುತ್ತೇನೆ
ಪ್ರತಾಪ್ ಸಿಂಹ, ಸುಮಲತಾ ನಡುವೆ ಟಾಕ್ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಬಿಜೆಪಿ ಪಕ್ಷಕ್ಕೆ ಸೇರ್ತಿಲ್ಲ. ನಾನು ಬಾಹ್ಯವಾಗಿ ಬೆಂಬಲ ಕೊಡ್ತಿದ್ದೀನಿ. ಒಂದೇ ಕುಟುಂಬದಲ್ಲೆ ಫೈಟ್ ಬರ್ತಿದೆ. ಒಂದೇ ಪಕ್ಷದಲ್ಲಿ ಇದ್ರೆ ಬರಲ್ವ. ಅದನ್ನು ಸವಾಲಾಗಿ ಎದುರಿಸುತ್ತೇನೆ. ಪ್ರತಾಪ್ ಸಿಂಹ ವಿಚಾರಕ್ಕೆ ಹಾಸನ ಟಿಕೆಟ್ ಫೈಟ್ ಪ್ರಸ್ತಾಪಿಸಿ ತಿರುಗೇಟು ನೀಡಿದರು.
ಪ್ರಾಣ ಬಿಟ್ಟರೂ ಮಂಡ್ಯ ಬಿಡಲ್ಲ
ನಾನು ಮಂಡ್ಯ ಬಿಟ್ಟು ಬೆಂಗಳೂರಿನಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಪ್ರಾಣ ಬಿಟ್ಟರೂ ಮಂಡ್ಯ ಬಿಡಲ್ಲ ಎಂದರು.