ಶಾಪಿಂಗ್ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಸಿನಿಮೀಯ ಶೈಲೀಯಲ್ಲಿ ವಯದ್ಯರೊಬ್ಬರು ಚಿಕಿತ್ಸೆ ನೀಡಿ ಪ್ರಾಣ ಉಳಿಸಿರುವ ಘಟನೆ ಬೆಂಗಳೂರು ನಗರದ ಐಕಿಯಾ ಮಾಲ್‌ನಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ವೈದ್ಯರ ಕಾರ್ಯಕ್ಕೆ ಮೆಚ್ಚುಗೆಯನ್ನ ಸೂಚಿಸಿದ್ದಾರೆ.
ಈ ವಿಡಿಯೋವನ್ನ ಸ್ವತಃ ವೈದ್ಯರ ಪುತ್ರ ರೀಹನ್ ಟ್ವೀಟ್ ಮಾಡಿದ್ದು ವೈದ್ಯರ ಮಗನಾಗಿ ಹುಟ್ಟಿರುವುದು ನನ್ನ ಪುಣ್ಯ ನಾವು ಐಕಿಯಾದಲ್ಲಿ ಶಾಪಿಂಗ್ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಪಕ್ಕದ ಲೇನ್‌ನಲ್ಲಿದ್ದ ವೈದ್ಯರು ಕೂಡಲೇ ನೆರವಿಗೆ ಧಾವಿಸಿ ಪ್ರಾಣವನ್ನ ಉಳಿಸಿದ್ದಾರೆ ಎಂದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.






