ದೆಹಲಿಯಲ್ಲಿ (Delhi) ಸೋನಿಯಾ (Sonia) ಎಂಬ ಯುವತಿಯ ಭೀಕರ ಮರ್ಡರ್ ನಡೆದಿದೆ. ವಿಚಿತ್ರ ಅಂದ್ರೆ ಭೂತವೇ ಆಕೆಯನ್ನ ಕೊಂದಿದೆ ಎಂದು ನಂಬಿಸಲಾಗಿತ್ತು. ಆದ್ರೆ ಈಗ ನಿಜವಾದ ಆರೋಪಿ ಯಾರು ಅಂತ ತಿಳಿದು ಯುವತಿಯ ಆಪ್ತರು ಶಾಕ್ ಆಗಿದ್ದಾರೆ.
ದೆಹಲಿಯ ನಂಗೋಯ್ ನಿವಾಸಿ ಸೋನಿಯಾ, ತನ್ನ ಮನೆಯವರ ಬಳಿ ನಾನು ಒಂದು ಪ್ರೇತವನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದು, ಜೊತೆಗೆ ಇನ್ನಾಗ್ರಾಂನಲ್ಲಿ ‘ಐ ಲವ್ ಭೂತ್ (I love bhooth) ಎಂದು ಬರೆದುಕೊಂಡು ತನ್ನ ಪ್ರೀತಿಯನ್ನ ಬಹಿರಂಗಪಡಿಸಿದ್ದಳು. ಆದರೆ ಅದೇ ಭೂತ ಆಕೆಯನ್ನ ಬಲಿ ಪಡೆದಿದೆ.
ಪೊಲೀಸರ ವಿಚಾರಣೆ ವೇಳೆ ಸಲೀಂ ಎಂಬಾತ ಎಲ್ಲಾವನ್ನು ಬಿಚ್ಚಿಟ್ಟಿದ್ದಾನೆ. ಸೋನಿಯಾ 7 ತಿಂಗಳ ಗರ್ಭಿಣಿ ಆಗಿದ್ದಳು, ಗರ್ಭಪಾತಕ್ಕೆ ಆಕೆ ಒಪ್ಪಿಲ್ಲ ಅಂತ ಕೊಂದಿದ್ದಾನೆ. ಆ ನಂತರ ಶವವನ್ನು ರೋಷ್ಟಕ್ ಬಳಿಯ ಕಾಡಿನಲ್ಲಿ ಹೂತು ಹಾಕಿದ್ದಾನೆ. ಈ ಕೊಲೆಯಲ್ಲಿ ತನ್ನ ಇಬ್ಬರು ಸ್ನೇಹಿತರಾದ ಹೃತಿಕ್ (Hrithik) ಮತ್ತು ಪಂಕಜ್ (Panka)) ಕೂಡ ಭಾಗಿಯಾಗಿದ್ದ ಬಗ್ಗೆ ಹೇಳಿದ್ದಾನೆ.