ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿಯಲು ಒಗ್ಗಟ್ಟಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ಡಿ.6 ರಂದು ನಡೆಯಬೇಕಿದ್ದ ಇಂಡಿಯಾ ಮೈತ್ರಿಕೂಟದ ಸಭೆ ಮುಂದೂಡಲಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲು ಕಂಡಿರುವ ಕಾಂಗ್ರೆಸ್ ಪರಾಮರ್ಶೆ ಮತ್ತು ಮುಂಬರುವ ಚುನಾಣೆ ಕುರಿತಾಗಿ ಚರ್ಚಿಸಲು ನಾಳೆ ಸಭೆ ನಡೆಸಲು ಮುಂದಾಗಿತ್ತು. ಆದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಾಳಿನ ಈ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ನಿತೀಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ತಮಗೆ ಈ ಸಭೆಯ ಕುರಿತು ಸೂಕ್ತ ರೀತಿಯಲ್ಲಿ ಮಾಹಿತಿ ಇಲ್ಲ ಅನ್ನೋ ಕಾರಣಕ್ಕೆ ಮಮತ ಬ್ಯಾನರ್ಜಿ ಈ ಸಭೆಗೆ ಹಾಜರಾಗುತ್ತಿಲ್ಲ ಅಂತ ಹೇಳಲಾಗ್ತಿದೆ.
ವಿಧಾನ ಸಭಾ ಚುನಾವಣೆ ವೇಳೆ ಇಂಡಿಯಾ ಮೈತ್ರಿಕೂಟವನ್ನ ಮರತು ಅತಿಯಾದ ಆತ್ಮವಿಶ್ವಾಸದಿಂದ್ದ ಕಾಂಗ್ರೆಸ್ ಸದ್ಯ ಸೋಲುಂಡಿದೆ. ಇದುವೇ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಕಾಂಗ್ರೆಸ್ ನಿಗದಿಪಡಿಸಿದ್ದ ಸಭೆಗೆ ಹಾಜರಾಗದೆ ಸೆಡ್ಡುಹೊಡೆದಿವೆ.