ಈ ವಾರ ಬಿಗ್ ಬಾಸ್(Bigg Boss) ಮನೆಯಲ್ಲಿ ವಿಲನ್ ಸಾಮ್ರಾಜ್ಯ ನಡೆಯುತ್ತಿದ್ದು, ಬಿಗ್ ಬಾಸ್ ಮನೆ ಚಿತ್ರ ವಿಚಿತ್ರ ಟಾಸ್ಕ್‌ಗಳಿಗೆ ಸಾಕ್ಷಿಯಾಗುತ್ತಿದೆ. ಈ ವಾರ ರಜತ್ ಮತ್ತು ಅಶ್ವಿನಿ ಗೌಡ ಅವರನ್ನು ಎರಡು ತಂಡಗಳ ಕ್ಯಾಪ್ಟನ್ ಮಾಡಲಾಗಿದ್ದು, ವಿಭಿನ್ನ ಟಾಸ್ಕ್ ನೀಡಲಾಗುತ್ತಿದೆ.

ಮೊದಲು ವಿಲನ್ ಒಂದು ಚಾಲೆಂಜ್ ನೀಡಿದ್ದು, ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಲೋಗೋವನ್ನು ಶಾಶ್ವತವಾಗಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಈ ವೇಳೆ ರಜತ್ ಮೊದಲು ಬಜರ್ ಒತ್ತುವ ಮೂಲಕ ತಮ್ಮ ಒಪ್ಪಿಗೆ ಸೂಚಿಸಿ ಬಳಿಕ ತಮ್ಮ ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡರು.

ಬಳಿಕ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಕಾವ್ಯ ತಲೆಗೆ ಹಳದಿ ಬಣ್ಣ ಹಾಕಿಕೊಳ್ಳುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಇಂದಿನ ಸಂಚಿಕೆಯಲ್ಲಿ ವಿಚಿತ್ರ ಟಾಸ್ಕ್ ನೀಡಿದ್ದು, ಚಿತ್ರದಲ್ಲಿ ತೋರಿಸದಂತೆ ಸ್ಪರ್ಧಿಯೊಬ್ಬರು ಹೇರ್ಸ್ಟೈಲ್ ಮಾಡಿಕೊಳ್ಳಬೇಕು. ಅಶ್ವಿನಿ ಗೌಡ ತಂಡ ಬಜರ್ ಒತ್ತುವ ಮೂಲಕ ಚಾಲೆಂಜ್ನ ಸ್ವೀಕರಿಸಿದ್ದು, ಮಾಳು ವಿಚಿತ್ರವಾದ ಹೇರ್ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇಂದಿನ ಪ್ರೋಮೋದಲ್ಲಿ ಸದ್ಯ ಇಷ್ಟು ಮಾಹಿತಿಗಳನ್ನು ಬಿಗ್ ಬಾಸ್ ತಂಡ ಬಿಟ್ಟುಕೊಟ್ಟಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಾಗಿದೆ.












