ವರ್ಷದ ಕೊನೆಯಲ್ಲಿ ನಡೆಯುವ ಗುಜರಾತ್ ಚುನಾವಣೆ ನಿಮಿತ್ತ ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದಲ್ಲಿರುವ ಕೌರವರ ಪಟ್ಟಿಯನ್ನು ಸಿದ್ದಪಡಿಸುವಂತೆ ರಾಜ್ಯ ಘಟಕದ ನಾಯಕರಿಗೆ ಸೂಚಿಸಿದ್ದಾರೆ.
ವರ್ಷದ ಕೊನೆಯಲ್ಲಿ ಚುನಾವಣೆ ಎದುರಿಸಲಿರುವ ಗುಜಾರತ್ನಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸಲು ಮೂರು ದಿನಗಳ ಚಿಂತನ ಶಿಬಿರದಲ್ಲಿ ಪಾಲ್ಗೊಂಡ ರಾಹುಲ್, ಕೇಂದ್ರ ಹಾಗೂ ಗುಜಾರಾತ್ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್ನಲ್ಲಿ ಈ ಭಾರೀ ವಿಜಯ ಪತಾಕೆ ಹಾರಿಸುವುದಕ್ಕೆ ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.
ಕಾರ್ಯಾಗಾರಕ್ಕೆ ಬರುವ ಮುನ್ನ ದ್ವಾರಕಧೀಶ ದೇವಾಲಯಕ್ಕೆ ಭೇಟಿ ನೀಡ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ನಂತರ ಅಲ್ಲಿನ ಸಾಂಪ್ರಾದಾಯಿಕ ಕುಣಿತವನ್ನು ನೋಡಿ ಕೆಲಕಾಲ ಆನಂದಿಸಿದರು.
ಮುಂದುವರೆದು, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಮಾಡುತ್ತಿರುವ ರಾಜಕಾರಣದಿಂದ ಗುಜರಾತ್ ತೀವ್ರ ಸಂಕಷ್ಟದಲ್ಲಿದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇಲ್ಲಿ ಗೆಲ್ಲುವ ಅವಕಾಶವಿದೆ ಆದರೆ, ಅಧಿಕಾರಕ್ಕೆ ಬಂದ ನಂತರ ಜನರಿಗೆ ಏನು ಮಾಡಬೇಕೆಂಬ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿಲ್ಲವಾದ್ದರಿಂದ ವಿಫಲವಾಗಿದೆ ಎಂದು ಹೇಳಿದ್ದರು.
ಅವರ ಬಳಿ ED, CBI, ಮಾಧ್ಯಮಗಳು ಹಾಗೂ ಪೊಲೀಸಿನವರಿದ್ದಾರೆ. ಆದರೆ, ಗುಜರಾತ್ ನಮಗೆ ಸತ್ಯವನ್ನು ತಿಳಿಸುತ್ತದೆ. ಗಾಂಧೀಜಿಯವರನ್ನು ನೋಡಿ ಅವರು ಎಂದಾದರೂ ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡಿದ್ದಾರ ಸತ್ಯವು ಸಹ ಅಷ್ಟೇ ಸರಳವಾಗಿರುತ್ತದೆ ಎಂದು ಹೇಳಿದ್ದಾರೆ.
ಮೊದಲಿಗೆ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ನಾವು ಗುಜರಾತ್ ಚುನಾವಣೆಯಲ್ಲಿ ಗೆದಿದ್ದೇವೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ, ನೀವು ಅದನ್ನ ಅರ್ಥ ಒಪ್ಪಿಕೊಳ್ಳಲು ಸಿದ್ದರಿಲ್ಲ ಗುಜರಾತಿನ ಮಹಾಜನತೆ ನಿಮ್ಮ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿ ಕಾಂಗ್ರೆಸ್ಗೆ ಹೆಚ್ಚು ಹಾನಿ ಮಾಡಿದ್ದಕ್ಕಿಂತ ಗುಜರಾತಿನ ಜನರಿಗೆ ಹೆಚ್ಚು ಹಾನಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಏಸಿ ಕೊಠಡಿಗಳಲ್ಲಿ ಕುಳಿತುಕೊಂಡು ಪಕ್ಷಕ್ಕೆ ಹಾನಿಯುಂಟು ಮಾಡುವಂತಹ ಹೇಳಿಕೆಗಳನ್ನು ನೀಡುವವರನ್ನು ಮೊದಲು ಪಕ್ಷದಿಂದ ತೆಗೆದು ಹಾಕಿ. ನಮ್ಮಲ್ಲಿ ಎರಡು ತರಹದ ನಾಯಕರಿದ್ದಾರೆ ನೆಲದ ಮೇಲೆ ಕುಳಿತುಕೊಂಡು ಜಗಳವಾಡುವವರು ಮತ್ತೊಬ್ಬರು ಎಸಿ ರೂಂಗಳಲ್ಲಿ ಕುಳಿತುಕೊಂಡು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವವರು ಇಂತಹ ನಾಯಕರನ್ನು ಕೌರವರೆಂದು ಹೆಸರಿಸಿ ಅವರನ್ನು ಬಿಜೆಪಿ ತನ್ನೆಡೆಗೆ ತೆಗದುಕೊಳ್ಳತ್ತದೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲಬೇಕೆಂದರೆ ತನಗೆ ಐವರು ಸಮರ್ಥ ನಾಯಕರ ಅವಶ್ಯಕತೆಯಿದೆ. 2017ರಲ್ಲಿ ರಾಜಕೀಯ ಪಂಡಿತರು ಹಾಗೂ ವಿಶ್ಲೇಷಕರು ಕಾಂಗ್ರೆಸ್ 40-15 ಸ್ಥಾನಗಳನ್ನು ಗೆಲ್ಲುತದೆ ಎಂದು ಹೇಳಿದ್ದರು. ಆದರೆ, ನಾವು ಚುನಾವಣೆಯಲ್ಲಿ ತೀವ್ರ ಪೈಪೋಟಿಯನ್ನು ನೀಡಿದ ನಂತರ ಏಳು ಸ್ಥಾನಗಳಿಂದ ಸೋತಿದ್ದೀವಿ ಅದನ್ನು ಯಾರೂ ಸಹ ಮರಿಯಬಾರದು ಎಂದು ಹೇಳಿದ್ದಾರೆ.
ಆಡಳಿತರೂಢ ಬಿಜೆಪಿ ಸರ್ಕಾರವು ದೇಶಾದ್ಯಂತ ಗುಜರಾತ್ ಮಾದರಿ ಎಂದು ಹೇಳಿಕೊಂಡು ಹೆಮ್ಮೆಪಡುತ್ತಿದ್ದರು. ಆದರೆ, Covid ಸಮಯದಲ್ಲಿ ಜನರು ಆಮ್ಲಜನಕ ವೆಂಟಿಲೇಟರ್ಗಳ ಕೊರತೆಯಿಂದಾಗಿ ಸುಮಾರು ಮೂರು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.
ಗುಜರಾತ್ ಬಿಜೆಪಿಯ ರಾಜಕಾರಣದಿಂದಾಗಿ ಬೇಸತ್ತು ಹೋಗಿದೆ. ನಿರುದ್ಯೋಗ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಸಣ್ಣ ಉದ್ಯಗಳು ಒಂದು ಕಾಲದಲ್ಲಿ ಗುಜರಾತಿನ ಬೆನ್ನೆಲುಬು ಎಂದೇ ಖ್ಯಾತಿ ಪಡೆದಿದ್ದವು. ಆದರೆ, ಮೋದಿ ಸರ್ಕಾರವು GST, ನೋಟುಗಳ ಅಮಾನ್ಯೀಕರಣ ಹಾಗೂ Covid ಸಮಯದಲ್ಲಿ ಮಾಡಿದ ಮಹಾನ್ ಕಾರ್ಯದಿಂದ ಅದನ್ನೆಲ್ಲಾ ನಾಶಪಡಿಸಿದರು ಎಂದು ಹೇಳಿದ್ದಾರೆ.