ನಾಡಿನೆಲ್ಲೆಡೆ ಗಣೇಶ ಹಬ್ಬದ (Ganesha festival) ಸಂಭ್ರಮ ಜೋರಾಗಿದೆ. ಗಣಪತಿ ಬಪ್ಪ ಮೋರೆಯ ಘೋಷಣೆಯ ಜೊತೆಗೆ ಗಣಪನನ್ನು ಪ್ರತಿಷ್ಠಾಪಿಸಿ ಸಂತಸಪಟ್ಟಿದ್ದಾರೆ. ಆದ್ರೆ ಕೆಲವೆಡೆ ಅವಘಡಗಳು ಕೂಡ ನಡೆದಿದ್ದು ಬೇಸರ ತರಿಸಿದೆ. ಮಂಡ್ಯದಲ್ಲಿ (Mandya) ಗಣೇಶ ವಿಸರ್ಜನೆಯ ವೇಳೆ ದುರಂತ ಸಂಭವಿಸಿದೆ.

ಹೌದು ಗಣೇಶ ವಿಚಾರಣೆಯ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ. ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಈ ದುರಂತ ಸಂಭವಿಸಿದೆ. ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದೆ. ಯರಹಳ್ಳಿ ಗ್ರಾಮದ ಪ್ರದೀಪ್( 28) ಮೃತ ಯುವಕ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿನ್ನೆ (ಆ.28) ರಾತ್ರಿ ಬೇಲೂರು ಯುವಕರು ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು ಮುಂದಾಗಿದ್ದರು. ಈ ವೇಳೆ ಯುವಕರ ಜೊತೆ ಪ್ರದೀಪ್ ಕೂಡ ನೀರಿಗಿಳಿದಿದ್ದ.ಈ ವೇಳೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರೆ.ಆ ಬಳಿಕ ನೀರಿನಿಂದ ಪ್ರದೀಪ್ ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದಿದ್ದಾರೆ.





