ದೇಶದ ಗ್ರಾಹಕರ ತಲೆ ಮೇಲಿದ್ದ ಜಿಎಸ್‌ಟಿ ತೆರಿಗೆ (GST) ಬರೆಯನ್ನ ಕೇಂದ್ರ ಸರ್ಕಾರ (Union government) ಇಳಿಸಿದೆ. ಈ ಮೂಲಕ ದೇಶದ ಜನರಿಗೆ ದಸರಾ-ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ. ಕೆಂಪುಕೋಟೆ ಮೇಲೆ ಮೋದಿ (Pm modi) ಮಾಡಿದ್ದ ಘೋಷಣೆ ಕೆಲವೇ ದಿನಗಳಲ್ಲಿ ಜಾರಿಗೆ ಬರುವುದು ಖಚಿತವಾಗಿದೆ.

ಕೇಂದ್ರದ ಈ ನಿರ್ಧಾರದಿಂದ ದೇಶದಲ್ಲಿ ಎಲ್ಲಾ ಫುಡ್, ಟೆಕ್ಸ್ ಟೈಲ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗಿದೆ. ದಸರಾ, ದೀಪಾವಳಿಗೆ ಮೋದಿ ಸರ್ಕಾರ ದೇಶದ ಜನರಿಗೆ ಸಿಹಿಸುದ್ದಿಯನ್ನ ನೀಡಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ಮುಂದೆ 4 ಸ್ಲ್ಯಾಬ್ ಗಳ ಬದಲು 2 ಫ್ಲ್ಯಾಬ್‌ಗಳಲ್ಲಿ ಜಿಎಸ್‌ಟಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಶೇಕಡಾ 5 ಮತ್ತು ಶೇಕಡಾ 18ರ ಸ್ಲ್ಯಾಬ್ ಗಳನ್ನು ಮಾತ್ರ ಉಳಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಈ ಜಿಎಸ್‌ಟಿ ಸ್ಲ್ಯಾಬ್ ಗಳು ನವರಾತ್ರಿ ಮೊದಲ ದಿನವಾದ ಸೆಪ್ಟೆಂಬರ್ 22 ರಂದು ಜಾರಿಯಾಗಲಿದೆ. ಈ ಮೂಲಕ ದೇಶವಾಸಿಗಳಿಗೆ ದಸರಾ, ದೀಪಾವಳಿ ಹಬ್ಬಕ್ಕೆ ನರೇಂದ್ರ ಮೋದಿ ಸರ್ಕಾರ ಶುಭ ಸುದ್ದಿ ನೀಡಿದೆ.