ಧರ್ಮಸ್ಥಳ (Dharmasthala) ವಿರುದ್ಧದ ಸೌಜನ್ಯ ಪರ (Justice for sowjanya) ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ (Mahesh shetty thimarodi) ಹಣೆಬರಹ ಕೆಟ್ಟಹಾಗಿದೆ. ಮೊನ್ನೆಯಷ್ಟೇ ಈತನ ಬಗ್ಗೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದರು. ಯಾವನೋ ಒಬ್ಬ ಮುಖ್ಯಮಂತ್ರಿಗಳನ್ನೇ ಕೊಲೆಗಾರ ಎಂದಿದ್ದಾನೆ. ನಮ್ಮ ಬಳಿ ದಾಖಲೆಗಳಿವೆ, ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಈ ಬಗ್ಗೆ ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಓರ್ವ ಕೊಲೆಗಾರ, ಅವರು ಕೊಲೆಗಳನ್ನು ಮಾಡಿದ್ದಾರೆ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಮಹೇಶ್ ತಿಮರೋಡಿ ಉದ್ಧಟತನದ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವನೇ ಸಿದ್ದರಾಮಯ್ಯ ಅವರು ಕೊಲೆಗಾರ ಅಂದಿದಾರೆ. ಇದೇ ನಿಮ್ಮ ಎಡಬಿಡಂಗಿತನ..ರಾಜ್ಯದ ಮುಖ್ಯಮಂತ್ರಿಯ ವಿರುದ್ಧವೇ 24 ಕೊಲೆಗಳ ಆರೋಪ ಮಾಡಿದ್ದಾನೆ.ಇದಕ್ಕೂ ಎಸ್.ಐ.ಟಿ ರಚನೆ ಮಾಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.