ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ (Maharashtra) ಮಹಾಯುತಿ ಭರ್ಜರಿ ಜಯಭೇರಿ ಬಾರಿಸಿದ್ದು, ಇಡೀ ದೇಶದ ಗಮನ ಸೆಳೆದಿತ್ತು. 288 ಸ್ಥಾನಗಳ ಪೈಕಿ 230ಕ್ಕೂ ಅಧಿಕ ಸ್ಥಾನಗಳು ಮಹಾಯುತಿ(Mahayuti) ಪಾಲಿಗೆ ದಕ್ಕಿದೆ. ಇಷ್ಟು ಪ್ರಚಂಡ ಬಹುಮತ ದೊರೆತ ಬಳಿಕವೂ ಮಹಾಯುತಿಯಲ್ಲಿ ಗೊಂದಲ ಮುಂದುವರೆದಿದೆ.
ಹೌದು, ಮಹಾರಾಷ್ಟ್ರದ ಸಿಎಂ (Maharashtra cm) ಗಾದಿಗಾಗಿ ಮಿತ್ರ ಪಕ್ಷಗಳ ನಡುವೆ ಫೈಟ್ ಮುಂದುವರೆದಿದ್ದು, ಇದುವರೆಗೂ ಒಂದು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಮಧ್ಯೆ ಇವತ್ತು ನೂತನ ಮಹಾರಾಷ್ಟ್ರ ಸಿಎಂ ಹೆಸರು ಘೋಷಣೆಯಾಗೋ ಸಾದ್ಯತೆಗಳಿವೆ.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ (Eknath shindhe) ಬಣದ ಶಿವಸೇನೆ ನಾಯಕರು ಬಿಹಾರ್ ಮಾದರಿಯಲ್ಲೆ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ ಬಿಜೆಪಿ (BJP) ಮತ್ತು ಆರ್.ಎಸ್.ಎಸ್ (RSS) ಫಡ್ನವಿಸ್ ರನ್ನ ಸಿಎಂ ಮಾಡಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಆದ್ರೆ ಇದಕ್ಕೆ ಒಪ್ಪದ ಶಿವಸೇನೆ (Shiva sene) ಶಿಂಧೆ ಬಣ,ಮೊದಲ ಅರ್ಧ ಅವಧಿಗೆ ಶಿಂಧೆಯನ್ನು ಮುಖ್ಯಮಂತ್ರಿ ಮಾಡಲು ಪಟ್ಟು ಹಿಡಿದಿದ್ದಾರೆ.ಈ ನಡುವೆಯೇ ವಿಪಕ್ಷಗಳು ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸಲು ಆಗ್ರಹಿದ್ದಾರೆ.ಸದ್ಯ ಇಂದು ಮಹಾರಾಷ್ಟ್ರದ ಹಾಲಿ ವಿಧಾನಸಭೆ ಅವಧಿ ಮುಕ್ತಾಯವಾಗಲಿದ್ದು, ಹೀಗಾಗಿ ಬಹುತೇಕ ಇಂದು ಮಹಾರಾಷ್ಟ್ರ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿದೆ.