ಇಡೀ ರಾಜ್ಯ ಸೇರಿದಂತೆ ಬೆಂಗಳೂರನ್ನೇ (Bangalore) ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮಿ ಬರ್ಬರ ಹತ್ಯೆ (Mahalakshmi murder case) ಕೇಸ್‌ಗೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಾಲಕ್ಷ್ಮಿಯ ದೇಹವನ್ನು ತುಂಡು ತುಂಡು ಮಾಡಿದ್ದ ರಕ್ತ ಪಿಪಾಸು ಸಾವನ್ನಪ್ಪಿದ್ದಾನೆ.

ಮಹಾಲಕ್ಷ್ಮಿ ಕೊಲೆ ಬೆಳಕಿಗೆ ಬಂದ ಮೇಲೆ, ಬೆಂಗಳೂರು ಪೊಲೀಸರು ಕೊಲೆಯ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ರು.ಆದ್ರೆ ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ (Mukti ranjan roy) ಪೊಲೀಸರ ಕೈಗೆ ಸದ್ಯ ಶವವಾಗಿ ಸಿಕ್ಕಿದ್ದಾನೆ.
ಒಡಿಶಾದ (Odissa) ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ.ಈತನ ಬೆನ್ನು ಬಿದ್ದು ತನಿಖೆ ನಡೆಸಿದ ಪೋಲಿಸರಿಗೆ ಸದ್ಯ ಕುಳೆಪಾ ಎಂಬಲ್ಲಿ ಸ್ಮಶಾನದ ಬಳಿ ಮುಕ್ತಿ ರಂಜನ್ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ.





