ಮೈಸೂರಿನ (Mysuru) ಕ್ಯಾತಮಾರನಹಳ್ಳಿ (Kyatamaranahalli) ವಿವಾದಿತ ಸ್ಥಳದಲ್ಲಿ ಮದರಸ (Madarasa) ರೀ ಓಪನ್ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ,ಈಗ ಮದರಸ ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿರುವ ಹಿನ್ನಲೆ,ಡಿಸಿ ಆದೇಶ ಈಗ ಮೈಸೂರಿನಲ್ಲಿ ಮತ್ತೊಂದು ಧರ್ಮ ದಂಗಲ್‌ಗೆ ಕಾರಣವಾಗುತ್ತಾ ಎಂಬ ಚರ್ಚೆ ಶುರುವಾಗಿದೆ.

ಈ ಮದರಸ ತೆರೆಯಲು ಡಿಸಿ ಅನುಮತಿಗೆ ವಿರೋಧ ವ್ಯಕ್ತಪಡಿಸಿರುವ ಕ್ಯಾತಮಾರನಹಳ್ಳಿ ಹಿಂದು ಮುಖಂಡರು ಈ ಬಗ್ಗೆ ಇಂದು ಕ್ಯಾತಮಾರನಹಳ್ಳಿಯಲ್ಲಿ ಮಹತ್ವದ ಸಭೆ ನಡೆಸಲು ಮುಂದಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹಿಂದೂಪರ ಸಂಘಟನೆ ಕಾರ್ಯಕರ್ತರು ಕ್ಯಾತಮಾರನಹಳ್ಳಿ ಹುಲಿಯಮ್ಮ ದೇವಸ್ಥಾನ ಟ್ರಸ್ಟ್‌ನಲ್ಲಿ ಸಭೆಗೆ ಮುಂದಾಗಿದ್ದು,ವಿವಾದಿತ ಸ್ಥಳದಲ್ಲಿ ಅರೆಬಿಕ್ ಶಾಲೆಯನ್ನು ತೆರೆಯಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.ಈ ಆದೇಶವನ್ನು ವಿರೋಧಿಸಿ ಇಂದು ಬೆಳಗ್ಗೆ 11:00 ಗಂಟೆಗೆ ಸಭೆ ನಡೆಯಲಿದ್ದು ಈ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.