• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಮಡಿಕೇರಿ ಭಾಗಮಂಡಲ ಜಲಾವೃತ.. ಸಂಪರ್ಕ ಕಡಿತ

ಪ್ರತಿಧ್ವನಿ by ಪ್ರತಿಧ್ವನಿ
May 16, 2024
in ಇತರೆ / Others, ಇದೀಗ, ಕರ್ನಾಟಕ
0
Share on WhatsAppShare on FacebookShare on Telegram

ಮಡಿಕೇರಿಯ ಭಾಗಮಂಡಲ ಜಲಾವೃತ; ಸಂಪರ್ಕ ಕಡಿತ.. ​

ADVERTISEMENT

ಮೇಲಿನ ಹೆಡ್​ಲೈನ್​ ನೋಡಿ ಶಾಕ್​ ಆಗಬೇಡಿ, ಕೊಡಗಿನಲ್ಲಿ ಧಾರಾಕಾರ ಮಳೆಯಾಯ್ತಾ ಅಂದುಕೊಳ್ಳಬೇಡಿ. ಆದರೆ ಪ್ರತಿವರ್ಷ ಈ ರೀತಿಯ ಹೆಡ್​ಲೈನ್​ ಕೆಲದಿನಗಳ ಕಾಲ ಕಾಯಂ. ಮಳೆಗಾಲ ಶುರುವಾದ ಬಳಿಕ ಭಾರೀ ಮಳೆಯ ಪರಿಣಾಮ ಕಾವೇರಿ ಭೋರ್ಗರೆದು ಹರಿಯುತ್ತಾಳೆ. ಅದರಲ್ಲೂ ಕಾವೇರಿಯ ಉಗಮಸ್ಥಾನ ಭಾಗಮಂಡಲದಲ್ಲಿ ಜಲಾವೃತವಾಗುವ ಪರಿಣಾಮ ವಾಹನ ಸಂಚಾರ ಮಾಡುವುದೂ ದುಸ್ತರ ಎನ್ನುವಂತಾಗುತ್ತದೆ. ಆದರೆ ಇನ್ಮುಂದೆ ಭಾಗಮಂಡಲ ಜಲಾವೃತ, ವಾಹನ ಸಂಚಾರ ನಿಷಿದ್ಧ ಎನ್ನುವ ಮಾತು ಕೇಳಿಬರುವುದಿಲ್ಲ. ಆದರೆ ಭಾಗಮಂಡಲದಲ್ಲಿ ತುಂಬಿ ಹರಿಯುವ ನದಿಯನ್ನು ಕಣ್ತುಂಬಿಕೊಳ್ಳುವ ಅವಕಾಶವೊಂದು ತೆರೆದುಕೊಂಡಿದೆ.

ಹಾಲಿ ಇಂಧನ ಸಚಿವರಾಗಿ ಕೆಲಸ ಮಾಡುತ್ತಿರುವ ಕೆ.ಜೆ ಜಾರ್ಜ್​, 2018ರಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರ ದೂರದೃಷ್ಟಿ ಯೋಜನೆ ಇಂದು ಸಾಕಾರಗೊಂಡಿದೆ. ಭಾಗಮಂಡಲದಲ್ಲಿ 880 ಮೀಟರ್ ಉದ್ದದ ಮೇಲ್ಸೇತುವೆ ಯೋಜನೆಗೆ ಒಪ್ಪಿಗೆ ಪಡೆದಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಕೊಡಗಿನ ಜನರ ಸಂಕಷ್ಟಕ್ಕೆ ತೆರೆಬೀಳುವ ವಿಶ್ವಾಸ ಮೂಡಿಸಿದೆ.

ಭಾಗಮಂಡಲದ ಪ್ರವಾಹ ಪೀಡಿತ ಪ್ರದೇಶದಲ್ಲಿ ಅತ್ಯಂತ ಅಗತ್ಯವಾಗಿದ್ದ ಈ ಸೇತುವೆಯನ್ನು ನಿರ್ಮಿಸುವಲ್ಲಿ ಜಾರ್ಜ್​ ಅವರ ಪ್ರಯತ್ನದ ಫಲ ಇಂದು ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ಮಳೆಗಾಲದಲ್ಲಿ ಸದಾ ಒಂದಕ್ಕೊಂದು ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಅಪಾಯ ಪ್ರತಿವರ್ಷವೂ ಎದ್ದು ಕಾಣುತ್ತಿತ್ತು. ಆದರೆ ಇದೀಗ ಮೇಲ್ಸೇತುವೆ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದಾರೆ. ನೂರಾರು ವರ್ಷಗಳಿಂದ ಮಳೆಗಾಲದಲ್ಲಿ ಜೀವ ಕೈಲಿಡಿದು ಸಂಚಾರ ಮಾಡುತ್ತಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

2018ರಲ್ಲಿ ಕೊಡಗು ಉಸ್ತುವಾರಿ ಸಚಿವರಾಗಿದ್ದ ಸಚಿವ ಕೆ.ಜೆ ಜಾರ್ಜ್, ಭಾಗಮಂಡಲ ಸಮಸ್ಯೆ ಬಗ್ಗೆ ಅರಿತುಕೊಂಡಿದ್ದರು. ಭಾಗಮಂಡಲ, ಚೇರಂಗಾಲ, ಕೋರಂಗಾಲ, ತಲಕಾವೇರಿ ಮತ್ತು ಅಯ್ಯಂಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸಲು ಈ ಸೇತುವೆಯ ಅಗತ್ಯವನ್ನು ಸಂಪುಟದಲ್ಲಿ ಪ್ರಸ್ತಾಪಿಸಿದರು. ಮಳೆಗಾಲದಲ್ಲಿ ಈ ಪ್ರದೇಶದ ಜೀವನಾಡಿ ಕಾವೇರಿ ನದಿಯ ಆರ್ಭಟದಲ್ಲಿ ಈ ಪ್ರದೇಶಗಳ ಸಂಪರ್ಕ ಕಡಿತ ಆಗುವ ಬಗ್ಗೆ ಸರ್ಕಾರದ ಗಮನ ಸೆಳೆದು ಯೋಜನೆ ತಂದಿದ್ದರು. ಇದೀಗ ಸಚಿವ ಜಾರ್ಜ್ ಕಾರ್ಯ ಜನಮನ್ನಣೆ ಪಡೆಯುತ್ತಿದೆ.

ರಾಜಕೀಯ ನಾಯಕರು ಎನಿಸಿಕೊಂಡವರು ಜೀವನದಲ್ಲಿ ಸಾಕಷ್ಟು ರಾಜಕಾರಣ ಮಾಡುತ್ತಾರೆ. ಜೊತೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಾರೆ. ಆದರೆ ಅದರಲ್ಲಿ ಕೆಲವೊಂದು ಯೋಜನೆಗಳು ಭಾವನಾತ್ಮಕ ಸ್ಥಾನ ಪಡೆದುಕೊಳ್ಳುತ್ತವೆ. ತಮ್ಮ ಜೀವನದಲ್ಲಿ ಸಾರ್ಥಕತೆಯ ಮೈಲಿಗಲ್ಲು ಸ್ಥಾಪಿಸುತ್ತವೆ. ಅದೇ ರೀತಿ ಸಚಿವ ಕೆ.ಜೆ ಜಾರ್ಜ್ ಭಾಗಮಂಡಲ ಯೋಜನೆ ಮೂಲಕ​ ಸಾರ್ಥಕತೆ ಪಡೆದುಕೊಂಡಂತಿದೆ. ಆದರೂ ಶತಮಾನಗಳ ಸಮಸ್ಯೆಗೆ ಮುಕ್ತಿ ಕೊಟ್ಟಿರುವುದು ಆ ಭಾಗದ ಜನರ ನೆಮ್ಮದಿಗೆ ಕಾರಣವಾಗಿದೆ

Previous Post

ಬರ್ತ್ ಡೇ ಆಚರಿಸಿಕೊಳ್ಳಲ್ಲ.. ದೂರದಿಂದಲೇ ನಿಮ್ಮ ಹಾರೈಕೆ ಇರಲಿ : ಮಾಜಿ ಪಿಎಂ ದೇವೇಗೌಡ ಪತ್ರಿಕಾ ಪ್ರಕಟಣೆ

Next Post

ಮತ್ತೊಂದು ಪ್ರಕರಣದಲ್ಲಿ ಮತ್ತೆ ಜಾಮೀನು ಪಡೆದ ರೇವಣ್ಣ ! ಸದ್ಯಕ್ಕೆ ಸೇಫ್ ಆದ್ರಾ ಮಾಜಿ ಸಚಿವ ?!

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ಅಪಹರಣದ ಕೇಸ್ ನಲ್ಲಿ ಜೈಲುಪಾಲಾಗಿರುವ ಶಾಸಕ ಅಧಿಕಾರಿಗಳಿಗೆ ಹೇಳಿದ್ದೇನು?

ಮತ್ತೊಂದು ಪ್ರಕರಣದಲ್ಲಿ ಮತ್ತೆ ಜಾಮೀನು ಪಡೆದ ರೇವಣ್ಣ ! ಸದ್ಯಕ್ಕೆ ಸೇಫ್ ಆದ್ರಾ ಮಾಜಿ ಸಚಿವ ?!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada