3419 ಕೋಟಿ ರೂ. ಮೊತ್ತದ ಕರೆಂಟ್ ಬಿಲ್ ನೋಡಿದ ವ್ಯಕ್ತಿಯೊಬ್ಬ ಶಾಕ್ ಗೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಶಿವವಿಹಾರ್ ಕಾಲೋನಿಯ ವ್ಯಕ್ತಿಯೊಬ್ಬರಿಗೆ 1300 ರೂ. ಮಾಸಿಕ ಕರೆಂಟ್ ನೀಡಲು ಬದಲು 3419 ಕೋಟಿ ರೂ. ಬಿಲ್ ಬಂದಿದೆ. ಇದರಿಂದ ಆಘಾತಕ್ಕೆ ಒಳಗಾದ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಗಳು ಪ್ರಿಯಾಂಕ ಗುಪ್ತ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸರಕಾರ ನಡೆಸುವ ವಿದ್ಯುತ್ ಪೂರೈಕೆ ಕಂಪನಿ ಈ ಎಡವಟ್ಟು ಮಾಡಿದ್ದು, ಸಂಜೀವ್ ಕನ್ ಖಾನೆ ಅವರಿಗೆ ಜುಲೈ ತಿಂಗಳಲ್ಲಿ ನೀಡಿದ ಮನೆ ಕರೆಂಟ್ ಬಿಲ್ ನೋಡಿ ಆಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧ್ಯಪ್ರದೇಶದ ವಿದ್ಯುತ್ ವಿತರಣ್ ಕಂಪನಿ ಮ್ಯಾನ್ಯುಯೆಲ್ ನಿಂದ ಮಾಡಿದ ಬಿಲ್ ನಿಂದ ಈ ಎಡವಟ್ಟು ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದು, 1300 ರೂ. ಬದಲಿಗೆ 3419 ಕೋಟಿ ರೂ. ಬಿಲ್ ಬಂದಿದೆ ಎಂದು ಹೇಳಿದ್ದು, ಬಿಲ್ ಸರಿಪಡಿಸಿ 1300 ರೂ. ಬಿಲ್ ಕಳುಹಿಸಿಕೊಟ್ಟಿದೆ.