ಅಪಗಾತದಲ್ಲಿ ಮೃತಪಟ್ಟ ಬಾಲಕಿ ಶವವನ್ನು ಅಂಬ್ಯಲೆನ್ಸ್ ಸಿಗದೆ ಭುಜದ ಮೇಲೆ ಹೊತ್ತು ಸಾಗಿಸಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿದ ಬಾಲಕಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ವ್ಯವಸ್ಥೆ ಮಾಡಿರಲಿಲ್ಲ.
ಆಸ್ಪತ್ರೆಯ ಸಿಬ್ಬಂದಿಯ ವರ್ತನೆಯಿಂದ ಕುಪಿತಗೊಂಡ ಬಾಲಕಿಯ ಚಿಕ್ಕಪ್ಪ ಶವವನ್ನ ಬಸ್ ಸ್ಟಾಂಡ್ವರೆಗೂ ಭುಜದ ಮೇಲೆ ಹೊತ್ತು ಸಾಗಿದ್ದಾರೆ ಮತ್ತು ಸರ್ಕಾರಿ ಬಸ್ಸಿನಲ್ಲಿ ಶವ ಸಾಗಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ಸಿಂಗ್ರೌಲಿ ಜಿಲ್ಲೆಯಲ್ಲಿ ನವಜಾತ ಶಿಶುವಿನ ಮೃತದೇಹವನ್ನ ತಂದೆ ತಾಯಿ ಬೈಕಿನ ಪೆಟ್ಟಿಗೆಯಲ್ಲಿ ಸಾಗಿಸಿರುವ ಘಟನೆ ನಡೆದಿದೆ. ತಮ್ಮಗೆ ಆದ ಅನ್ಯಾದ ಬಗ್ಗೆ ನ್ಯಾ ದೊರಕಿಸಿಕೊಡುವಂತೆ ದಂಪತಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಗುವಿನ ಕಳೇಬರದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಆಗಷ್ಟ್ 1ರಂದು ಯುವಕನೋರ್ವ ತಮ್ಮ ತಾಯಿಯ ಮೃತದೇಹವನ್ನ ಬೈಕಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು 80 ಕಿ.ಮೀ ಸಾಗಿದ ಘಟನೆ ವರದಿಯಾಗಿತ್ತು.
ಇನ್ನು ಅಂಬುಲೆನ್ಸ್ ಕೊರತೆ ಬಗ್ಗೆ ಜನರು ಮಧ್ಯಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದ್ದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.