ಕರೋನಾ 2ನೇ ಅಲೆಯ ಹೊಡೆತಕ್ಕೆ ದೇಶ ನಲುಗಿ ಹೋಗಿದ್ದು, ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ದಾನಿಗಳಿಂದ ವೈದ್ಯಕೀಯ ನೆರವಿನ ಮಾಹಾಪೋರವೆ ಹರಿದುಬರುತ್ತಿದೆ. ಇದೀಗಾ ಮಧ್ಯಪ್ರದೇಶದ ರೈತನೊಬ್ಬ ಆಕ್ಸಿಜನ್ ಸಿಲಿಂಡರ್ ಖರೀದಿಸಲು ತನ್ನ ಮಗಳ ಮದುವೆಗೆ ಕೂಡಿಟ್ಟ 2 ಲಕ್ಷ ಹಣವನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಮೆಚ್ಚುಗೆ ಪಡೆದಿದ್ದಾರೆ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಗ್ವಾಲ್ ದೇವಿಯಾನ್ ಗ್ರಾಮದ ಚಂಪಾಲಾಲ್ ಗುರ್ಜರ್ ಜೀವಸಂರಕ್ಷಕ ಆಮ್ಲಜನಕದ ಸಿಲಿಂಡರ್ ಖರೀದಿಸಲು 2 ಲಕ್ಷ ರೂ ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ಮಯಾಂಕ್ ಅಗರ್ ವಾಲ್ಗೆ ಕೊಟ್ಟಿದ್ದಾರೆ.

ಕೃಷಿಯನ್ನೇನಂಬಿ ಜೀವನ ನಡೆಸುತ್ತಿರುವ ರೈತ ಗುರ್ಜರ್ ಅವರು ತಮ್ಮ ಮಗಳು ಅನಿತಾಳನ್ನು ಬಹಳ ಕಾಳಜಿಯಿಂದ ಬೆಳೆಸಿದ್ದರು ಮತ್ತು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಹಣ ಕೂಡಿಟ್ಟಿದ್ದರು. ಆದರೆ ಸಮಾಜ ಕೋವಿಡ್ ಸಮಸ್ಯೆಯಿಂದ ತತ್ತರಿಸುತ್ತಿರುವುದನ್ನು ಕಂಡು, ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿ, ಅದ್ದೂರಿ ಮದುವೆಯನ್ನು ರದ್ದುಗೊಳಿಸಿ, ವೈದ್ಯಕೀಯ ನೆರವಿಗೆ ಮುಂದಾಗಿದ್ದಾರೆ.
ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಎರಡು ಲಕ್ಷವನ್ನು ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ್ದೇನೆ ಇದರಿಂದ ಎರಡು ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಬಹುದು” ಎಂದು ರೈತ ಗುರ್ಜರ್ ತಿಳಿಸಿದ್ದಾರೆ. ಕೋವಿಡ್ ಪ್ರಕರಣ ಹೆಚ್ಚಳವಾಗಿದ್ದು, ಆಮ್ಲಜನಕದ ಸಮಸ್ಯೆಯೂ ತಲೆದೂರಿದೆ, ನನ್ನ ತಂದೆಯ ಉದಾತ್ತ ಕಾರ್ಯವು ತನ್ನನ್ನು ಸಂತೋಷಗೊಳಿಸಿದೆ ಎಂದು ಮಗಳು ಅನಿತಾ ಹೇಳಿದ್ದಾರೆ.
ರೈತ ಗುರ್ಜರ್ ಅವರ ಸಹಾಯಕ್ಕೆ ಜಿಲ್ಲಾಧಿಕಾರಿ ಮಯಾಂಕ್ ಅಗರ್ ವಾಲ್ ಸಂತಸ ವ್ಯಕ್ತಪಡಿಸಿದ್ದು, ಇತರರು ರೈತನ ಧನ ಸಹಾಯವನ್ನು ಮಾದರಿಯಾಗಿಸಿಕೊಂಡು ಸಹಾಯ ಮಾಡಿದರೆ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಸುಲಭವಾಗುತ್ತದೆ ಎಂದಿದ್ದಾರೆ.
ಕೋವಿಡ್ ಬಿಕ್ಕಟ್ಟು ಹಿನ್ನಲೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈಗಿನ ಈ ಪರಿಸ್ಥಿತಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರವೇ ಕಾರಣ, ಕೋವಿಡ್ 2 ನೇ ಅಲೆ ಜನವರಿಯಲ್ಲಿಯೇ ಉಲ್ಭಣಗೊಂಡಿದೆ. ಆಗ ತಕ್ಷಣ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದರೆ. ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಸಂದಿಗ್ಧ ಕಾದಲ್ಲಿ ರೆಮಿಡಿಸಿವಿರ್ ಸಿಗುತ್ತಿಲ್ಲ, ಆಕ್ಸಿಜನ್ ಇಲ್ಲ, ಐಸಿಯು ಇಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರದ ವೈಫಲ್ಯತೆ ಇದೆ.