DKS ಗಡ್ಡದ ಬಗ್ಗೆ ಮಾತ್ನಾಡಿ ಬಿಜೆಪಿ 60 ಸ್ಥಾನಕ್ಕೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26ರಿಂದ 6ಕ್ಕೆ ಬರ್ತಾರೆ ನೋಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ರು. ಮೈಸೂರಿನಲ್ಲಿ ಮಾತ್ನಾಡಿದ ಅವರು, ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಮಾತಾಡಿದ್ರಾ..? ಮೋದಿ ಕೋವಿಡ್ ಟೈಂನಲ್ಲಿ ಗಡ್ಡ ಬಿಟ್ಟಿದ್ದನ್ನ ಯಾಕೆ ಪ್ರಶ್ನಿಸಲಿಲ್ಲ..? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ..? ಕೆಲ ಮಕ್ಕಳು ಶಿಕ್ಷಣ ಸಚಿವರು ಒಳ್ಳೆಯ ಹೇರ್ ಸ್ಟೈಲ್ನಲ್ಲಿದ್ದಾರೆ. ನಮಗ್ಯಾಕೆ ಆ ಥರ ಸ್ಟೈಲ್ ಮಾಡಲು ಅವಕಾಶ ಇಲ್ಲ ಅಂತ ಕೇಳ್ತಾರೆ. 40% ಕಮಿಷನ್ ಪಡೆದ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಬಂದಿಲ್ಲ. ಹೇರ್ ಕಟ್ ಮಾಡಲು ಬರುವವರು ನಾನು ಟೈಂ ಕೊಟ್ಟಾಗ ಬರಲಿ.
ಅವರ ತಜ್ಞತೆ ನೋಡಿ ಆ ಕೆಲಸ ಕೊಡುತ್ತೇನೆ, ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ, ಅವರಂತೆ ನನಗೆ ದುರ್ಬುದ್ಧಿ ಇಲ್ಲ. ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆಯವರು ನನಗೆ ಒಳ್ಳೆಯ ಬುದ್ಧಿಯನ್ನು ಕಲಿಸಿದ್ದಾರೆ. ತಂದೆಯವರಿಗೆ ನನ್ನ ಹೇರ್ ಸ್ಟೈಲ್ ಬಗ್ಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ.. ಇವರ ಮಾತುಗಳನ್ನ ನಾನು ಕೇಳಲ್ಲ.
ಜೂನ್ 4ರ ನಂತರ ವಿಜಯೇಂದ್ರರಿಗೆ ಬೇರೆಯದ್ದೆ ಕೆಲಸ ಕೊಡ್ತೇನೆ. ನಾನು ಸವಿತಾ ಸಮಾಜಕ್ಕೆ ಅವಮಾನ ಆಗೋ ರೀತಿ ಮಾತಾಡಿಲ್ಲ. ವಿಜಯೇಂದ್ರಗೆ ಉತ್ತರ ಕೊಟ್ರೆ ಇವರು ಯಾಕೆ ಪ್ರತಿಭಟಿಸಬೇಕು. ಯಾರಿಗೂ ಅವಮಾನಿಸುವ ನಡವಳಿಕೆಯನ್ನ ನಮ್ಮ ತಂದೆ ಹೇಳಿ ಕೊಟ್ಟಿಲ್ಲ.
ಯಾರೋ ಅವರಿಗೆ ಮಿಸ್ ಲೀಡ್ ಮಾಡಿರಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ರು..
Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...
Read moreDetails