ಉತ್ತರಕನ್ನಡ : ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಒಬ್ಬ ಹುಚ್ಚ. ಅವನಿಗೆ ಸಂಸ್ಕೃತಿ ಇಲ್ಲ. ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ

ಶಿರಸಿಯಲ್ಲಿ ಮಾತನಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತ್‌ಕುಮಾರ್ ಹೆಗಡೆ. ನಾಲ್ಕು ವರ್ಷ ಕೂತ್ಕೊಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು. ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ನಾವು ಧಿಕ್ಕಾರ ಮಾಡಲೇಬೇಕು. ಜನ ಅವನನ್ನು ಬದಲಾವಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಿಜೆಪಿ ಅವನಿಗೆ ಟಿಕೆಟ್ ಕೊಡ್ಬೇಕು. ಆಗ ನಾವು ಅವರನ್ನ ಉಪಚಾರ ಮಾಡೋಕೆ ಬರುತ್ತೇವೆ. ನಾನು ಕೂಡ ಸೋತಿದ್ದೇನೆ. ಆದರೆ ಮಾನ ಮರ್ಯಾದೆ ಬಿಟ್ಟು ಈ ಥರ ಮಾಡೋದನ್ನ ಮಾಡಿಲ್ಲ. ಮನುಷ್ಯನೇ ಅಲ್ಲ ಅವನು, ತಲೆಕೆಟ್ಟಿರೋ ವ್ಯಕ್ತಿ. ಮಾನ ಮರ್ಯಾದೆ ಇಲ್ಲದಿರೋ ವ್ಯಕ್ತಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು