ರಾಜ್ಯಗಳ ಅಧಿಕಾರವನ್ನು ಕಡಿಮೆ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನಿಸುತ್ತಿದೆ. ಈ ಕುರಿತು ಹೋರಾಡಲು ಪ್ರತಿಪಕ್ಷಗಳ ಒಗ್ಗಟ್ಟು ಅವಶ್ಯಕತೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K. Stalin) ಪ್ರತಿಪಾದಿಸಿದ್ದಾರೆ.
“ರಾಜ್ಯಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲು” ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದು ಸ್ಟಾಲಿನ್ ಆಗ್ರಹಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಆತ್ಮಚರಿತ್ರೆಯ (autobiography) ಶೀರ್ಷಿಕೆಯ ಮೊದಲ ಸಂಪುಟ ಉಂಗಲಿಲ್ ಒರುವನ್ (Ungalil Oruvan) (ನಿಮ್ಮ ನಡುವೆ ಒಬ್ಬರು) ಪುಸ್ತಕ ಬಿಡುಗಡೆ ಮಾಡಿದ ನಂತರ ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್, (Congress ) ಸಿಪಿಐ(ಎಂ), CPI(M) ಮತ್ತು ಇತರ ಪ್ರಾದೇಶಿಕ ಸಂಘಟನೆಗಳಂತಹ ಪಕ್ಷಗಳಿಂದ ಬೆಂಬಲವನ್ನು ಇದೇ ವೇಳೆ ಕೋರಿದರು. ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವ ಸಂವಿಧಾನಕ್ಕೆ (Constitution) ತಿದ್ದುಪಡಿ ತರಲು ನಾವೆಲ್ಲ ಹೋರಾಡಬೇಕು. ದೇಶವು ವಿಭಜಕ ಶಕ್ತಿಗಳಿಂದ ದೊಡ್ಡ ಆತಂಕವನ್ನು ಎದುರಿಸುತ್ತಿದೆ. ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆಯಿರುವ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ, ಭಾರತದ ತತ್ವಗಳನ್ನು ರಕ್ಷಿಸುವ ಮೂಲಕ ದೇಶವನ್ನು ಉಳಿಸಲು ನಾವೆಲ್ಲ ಸಿದ್ಧರಾಗಬೇಕು ಎಂದು ಸ್ಟಾಲಿನ್ ಒತ್ತಿ ಹೇಳಿದ್ದಾರೆ.

ಕೇಂದ್ರದ ನೀತಿಯಿಂದ ರಾಜ್ಯಗಳು ಶಕ್ತಿಹೀನ ವಲಯಗಳಾಗಿ ಬದಲಾಗುತ್ತಿವೆ. ಇದನ್ನು ತಡೆಯಲು ನಾವು ಕೈಜೋಡಿಸಬೇಕು. ದೇಶದ ಎಲ್ಲಾ ಪಕ್ಷಗಳು ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಸ್ಟಾಲಿನ್ ಹೇಳಿದರು.
ಬಿಹಾರದ (Bihar) ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ (Tejashwi Yadav) ಅವರು ನ್ಯಾಯಾಂಗದಲ್ಲಿ ಮೀಸಲಾತಿಗಾಗಿ ಈ ವೇದಿಕೆಯನ್ನು ಬಳಸಿಕೊಂಡರು. ಮೀಸಲಾತಿಗಾಗಿ ಬೀದಿಗಿಳಿಯುವ ಸಮಯ ಬಂದಿದೆ ಎಂದು ತಳಿಸಿ, ದೇಶದಲ್ಲಿ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಮಾತನಾಡಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಕಲ್ಪನೆಯನ್ನು ಕೊಂದಿದೆ ಎಂದು ವಾಗ್ದಾಳಿ ನಡೆಸಿದರು.
ವ್ಯವಸ್ಥೆ ವಿರುದ್ಧ ಹೋರಾಟ
ಮುಂದುವರೆದು, ಆಯ್ಕೆ ಮಾಡುವ ಸ್ವಾತಂತ್ರ್ಯ ಇನ್ನು ನಮ್ಮದಲ್ಲ. ನಾನು ಧರ್ಮವನ್ನು ಅನುಸರಿಸಿದರೂ, ನಾನು ಎಷ್ಟು ಅನುಸರಿಸುತ್ತೇನೆ ಎಂಬುದು ನಮಗೆ ನಿರ್ದೇಶಿಸಲ್ಪಟ್ಟಿದೆ. ಯಾವುದೇ ಸಮಾಲೋಚನೆಯಿಲ್ಲದೆ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ರಾಜ್ಯತ್ವವನ್ನು ಕಸಿದುಕೊಳ್ಳಲಾಗಿದೆ. ಇದು ಇಲ್ಲಿಗೆ ಕೊನೆಯಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುವ ಪ್ರಯೋಗವನ್ನು ಇತರ ಸ್ಥಳಗಳಲ್ಲಿಯೂ ಮಾಡಬಹುದು. ಮೊದಲ ಬಾರಿಗೆ, ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸಲಾಯಿತು ಎಂದರು.

ನಾಳೆ ತಮಿಳುನಾಡು (Tamil Nadu) ಅಥವಾ ಕೇರಳದಲ್ಲಿ (Kerala) ರಾಜ್ಯಪಾಲರ ಆಳ್ವಿಕೆ ಹೇರಿದರೆ ಹೇಗೆ? ತಮಿಳುನಾಡನ್ನು ಮೂರು ರಾಜ್ಯಗಳಾಗಿ ವಿಭಜಿಸಿದರೆ ಏನಾಗುತ್ತದೆ? ನಾವು ನಡೆಸುವ ಹೋರಾಟ ರಾಜಕೀಯ ಪಕ್ಷದ ವಿರುದ್ಧವಲ್ಲ, ಆದರೆ ಒಂದು ವ್ಯವಸ್ಥೆಯ ವಿರಿದ್ಧ. ಇದಕ್ಕೆ ವಿವಿಧ ರಾಜ್ಯಗಳಲ್ಲಿನ ರಾಜಕೀಯ ಪಕ್ಷಗಳು ಒಗ್ಗೂಡಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಒಮರ್ ಆಗ್ರಹಿಸಿದರು.
ತಮಿಳು ಸಂಪರ್ಕ ನೆನಪಿಸಿಕೊಂಡ ರಾಹುಲ್
ವಿಶೇಷ ಭಾಷಣ ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಕೇಳಿ; ತಮಿಳುನಾಡಿಗೆ 300 ವರ್ಷಗಳು. ನೀವು ಜನರ ಧ್ವನಿಯನ್ನು ಹೇಗೆ ತೆಗೆದುಹಾಕುತ್ತೀರಿ? ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಸಂಸತ್ತಿನಲ್ಲಿ ತಮಿಳು ಸಂಸ್ಕೃತಿ ಮತ್ತು ಅವರ ಭಾಷಣವನ್ನು ನೆನಪಿಸಿಕೊಳ್ಳುತ್ತಾ, ನೀವು [ಬಿಜೆಪಿ] ನಿಮ್ಮ ಇಡೀ ಜೀವನ ತಮಿಳುನಾಡನ್ನು ಆಳಲು ಸಾಧ್ಯವಿಲ್ಲ. ನಾನು ನನ್ನ ಭಾಷಣದಲ್ಲಿ ತಮಿಳುನಾಡಿನ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಪತ್ರಕರ್ತರೊಬ್ಬರು ನನ್ನನ್ನು ಕೇಳಿದಾಗ ನಾನು ತಮಿಳಿನವನು ಎಂದು ನಾನು ಅರಿತುಕೊಂಡೆ, ಏಕೆಂದರೆ ನನ್ನ ರಕ್ತವು ನಿಮ್ಮ ಮಣ್ಣಿನೊಂದಿಗೆ ಇದೆ ಎಂದು ಭಾವನಾತ್ಮಕಬಾಗಿ ಮಾತನಾಡಿದರು.
ತಂದೆಯನ್ನು ಕಳೆದುಕೊಂಡಿರುವುದು ನನಗದು ಬಹಳ ಕಷ್ಟದ ಅನುಭವ. ಆದರೆ ನಾನು ಕಲಿತ ಪಾಠ ದೊಡ್ಡದು. ಹಾಗಾಗಿ ನನ್ನನ್ನು ತಮಿಳನೆಂದು ಕರೆಯುವ ಹಕ್ಕಿದೆ ಎಂದು ನಾನು ಅರಿತುಕೊಂಡೆ ಎಂದು ಗಾಂಧಿ ಹೇಳಿದರು.

ಪ್ರಧಾನಿ ಇಲ್ಲಿಗೆ ಬಂದಾಗ, ಅವರು ಕೆಲವು ಇತರ ವಿಚಾರಗಳನ್ನು ಹೇರಲು ಪ್ರಯತ್ನಿಸುತ್ತಾರೆ. ಅವರು ರಾಜ್ಯ ಮತ್ತು ದೇಶವನ್ನು ಅವಮಾನಿಸುತ್ತಾರೆ. ತಮಿಳುನಾಡಿಗೆ ಏನು ಬೇಕು ಎಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ನೀಟ್ ಅಗತ್ಯವಿಲ್ಲ ಎಂದು ತಮಿಳುನಾಡಿನ ಹೇಳಿದಾಗ ಮತ್ತು ಜಿಎಸ್‌ಟಿ ಉತ್ಪಾದಕ ರಾಜ್ಯಗಳಿಗೆ ಹಾನಿ ಮಾಡುತ್ತದೆ, ನೀವು ಅದನ್ನು ಗೌರವಿಸುವುದಿಲ್ಲ. ನೀವೇಕೆ ಅಗೌರವ ತೋರುತ್ತೀರಿ ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ. ಬಿಜೆಪಿಯು ತಮಿಳುನಾಡು ಮತ್ತು ರಾಷ್ಟ್ರವನ್ನು ಅರ್ಥಮಾಡಿಕೊಂಡಿಲ್ಲ. ಇಂದಿನಿಂದ 3000 ವರ್ಷಗಳ ನಂತರ ನೀವು ತಮಿಳುನಾಡಿನ ಜನರ ಮೇಲೆ ಏನನ್ನೂ ಹೇರಲು ಸಾಧ್ಯವಿಲ್ಲ. ಇದು ಪ್ರಧಾನಿಯವರ ತಪ್ಪು ತಿಳುವಳಿಕೆ ಎಂದು ರಾಹುಲ್ ವಿವರಿಸಿದರು.