ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮುಂಗಾರು ಅಧಿವೇಶನಕ್ಕು ಮುನ್ನ ಶನಿವಾರ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.
ಶನಿವಾರ ಸಂಜೆ ಸಂಸತ್ ಭವನದಲ್ಲಿ ಸಭೆ ನಡೆಯಲಿದ್ದು ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಭಾಗಿಯಾಗುವ ಸಾಧ್ಯತೆ ಹೆಚ್ಚಿದೆ. ಅಧಿವೇಶನದ ಸಮಯದಲ್ಲಿ ಚರ್ಚಿಸಬೇಕಾದ ವಿಷಯ ವಿಧೇಯಕಗಳ ಬಗ್ಗೆ ಸಮಯ ಹಂಚಿಕೆ ಕುರಿತು ಚರ್ಚಿಸಲಾಗುವುದು ಎಂದಿ ತಿಳಿದು ಬಂದಿದೆ.
ಪ್ರತಿ ಅಧಿವೇಶನಕ್ಕು ಮುನ್ನ ಸ್ಪೀಕರ್ ಈ ಸಾಂಪ್ರದಾಯಿಕವಾಗಿ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಜುಲೈ 18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಲಿದೆ.