ಶ್ರೀಲಂಕಾದ ಉಚ್ಚಾಟಿತ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ರಾಜಪಕ್ಸೆ ರಾಜೀನಾಮೆಯನ್ನು ಶ್ರೀಲಂಕಾ ಸಂಸತ್ತು ಶುಕ್ರವಾರ ಅಂಗೀಕರಿಸಿದ್ದು ಕಳೆದ ಶನಿವಾರ ಲಕ್ಷಾಂತರ ಜನರು ಬೀದಿಗಿಳಿದು ಅವರ ಅಧಿಕೃತ ನಿವಾಸವನ್ನ ಆಕ್ರಮಿಸಿಕೊಂಡ ನಂತರ ರಾಜಪಕ್ಸೆ ಮಾಲ್ಡೀವ್ಸ್ ನಂತರ ಸಿಂಗಾಪುರಕ್ಕೆ ಹಾರಿದ್ದರು.

ಈ ಕುರಿತು ಪತ್ರ ಬರೆದಿರುವ ರಾಜಪಕ್ಸೆ ಶ್ರೀಲಂಕಾದ ಆರ್ಥಿಕ ಬಿಕ್ಟ್ಟು ತನ್ನ ಅಧ್ಯಕ್ಷೀಯ ಅವಧಿಗೂ ಮುನ್ನವೇ ಬೇರೂರಿದೆ ಜೊತೆಗೆ ಕೋವಿಡ್-19 ಪರಿಸ್ಥಿತಿಯು ಪ್ರವಾಸಿಗರು ಹಾಗೂ ಅಮದಿನ ಮೇಲೆ ಹೆಚ್ಚು ಪೆಟ್ಟು ನೀಡಿತ್ತು ಎಂದಿದ್ದಾರೆ.
ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ನಾನು ಸರ್ವಪಕ್ಷ ಅಥವಾ ಏಕೀಕೃತ ಸರ್ಕಾರವನ್ನು ರಚಿಸಲು ಮುಂದಾದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.