ಉತ್ತರ ಭಾರತ ಈಗ ವಿಧಾನಸಭೆ ಚುನಾವಣೆಗೆ ತಯಾರಾಗುತ್ತದೆ ಕೆಲವೊಂದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ತಯಾರಿಯನ್ನು ನಡೆಸುತ್ತವೆ ಇನ್ನು ಈ ವರ್ಷದ ಕೊನೆಗೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಿಸಲು ಪೈಪೋಟಿ ನಡೆಸಿವೆ, ಹೀಗಾಗಿ ಘೋಷಣೆಗಳ ಮೇಲೆ ಘೋಷಣೆಯನ್ನು ಎರಡು ಪಕ್ಷಗಳು ಮಾಡುತ್ತವೆ
ಇನ್ನು ಮಧ್ಯಪ್ರದೇಶ ಬಿಜೆಪಿ ಸರ್ಕಾರ ಕೂಡ ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದು, ದೇಶವೇ ಅಚ್ಚರಿ ಪಡುವಂತಹ ಘೋಷಣೆಗಳನ್ನು ಮಾಡುತ್ತಿದೆ ಗಾಗಲೇ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ಗಳ ಮೇಲೆ ಬೆಲೆ ಏರಿಕೆ ಮಾಡಿದೆ ಆದರೆ ಉತ್ತರ ಪ್ರದೇಶದ ಬಿಜೆಪಿ ಕಡಿಮೆ ದರದಲ್ಲಿ ಸಿಲಿಂಡರ್ ಕೊಡುತ್ತೇವೆ ಎಂದು ಹೇಳಿದರು ಅಚ್ಚರಿಗೆ ಎಡೆಮಾಡಿಕೊಟ್ಟಿದೆ
450 ರೂ.ಗೆ ಎಲ್.ಪಿ.ಜಿ. ಸಿಲಿಂಡರ್, ಮಹಿಳೆಯರ ಮೀಸಲಾತಿಯನ್ನು ಶೇಕಡ 30 ರಿಂದ 35ಕ್ಕೆ ಹೆಚ್ಚಳ ಮಾಡುವುದಾಗಿ ಬಿಜೆಪಿ ಹೇಳಿರುವುದು ಅಲ್ಲಿನ ಜನರನ್ನು ಅಚ್ಚರಿಕೆ ದೂಡಿದೆ ಹಾಗೂ ಬಿಜೆಪಿಯ ಘೋಷಣೆಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ
ಲಾಡ್ಲಿಬೆಹೆನಾ ಯೋಜನೆ ಅಡಿ ಈ ಹಿಂದೆ ಮಾಸಿಕ 1000 ರೂ. ನೀಡುತ್ತಿದ್ದು, ಇದನ್ನು 1250 ರೂ.ಗೆ ಹೆಚ್ಚಳ ಮಾಡಲಾಗುವುದು. ಶ್ರಾವಣ ಮಾಸದಲ್ಲಿ 450 ರೂ.ಗೆ ಸಿಲಿಂಡರ್ ನೀಡಲಿದ್ದು, ಇನ್ನು ಮುಂದೆ ಇದೇ ದರದಲ್ಲಿ ಮಹಿಳೆಯರಿಗೆ ಸಿಲಿಂಡರ್ ನೀಡಲು ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರ ನೌಕರಿಯಲ್ಲಿ ಮಹಿಳೆಯರಿಗೆ ಶೇಕಡ 35 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.