ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲೆಂದೆ ಹೆಸರುವಾಸಿಯಾಗಿರುವ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಏಕಕಾಲದಲ್ಲಿ 7ಕಡೆ ದಾಳಿ ಮಾಡಿರುವ ಅಧಿಕಾರಿಗಳು ಸಣ್ಣ ನೀರಾವರಿ ಇಲಾಖೆ ಜೆಇ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮಡಿಕೇರಿ ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿ ಮೈಸೂರಿನಲ್ಲಿರುವ ನಾಗರಾಜು ನಿವಾಸದಲ್ಲಿ ದಾಖಲೆಗಳ ಪರಿಶೀಲನೆ.

ಕುಶಾಲನಗರ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಮೇಲೂ ದಾಳಿ ಇಂಟೆಲಿಜೆನ್ಸಿ ವಿಭಾಗಕ್ಕೆವರ್ಗಾವಾದರೂ ಹೋಗದೆ ಇದ್ದ ಪೊಲೀಸ್
ಡಿವೈಎಸ್ ಪಿ ಮಾಲತೇಶ್, ಪವನ್, ಸಣ್ಣ ತಮ್ಮಪ್ಪ ಒಡೆಯರ್,ಕೃಣ್ಣಯ್ಯ ನಾಲ್ವರು ಡಿವೈಎಪ್ ಪಿ ಇನ್ಸ್ ಪೆಕ್ಟರ್ ಲೋಕೇಶ್ಷ ರವಿಕುಮಾರ್, ಶಶಿಕುಮಾರ್, ಉಮೇಶ್, ಜಯರತ್ನ, ರೂಪಶ್ರೀ ಹಾಗೂ ಸಿಬ್ಬಂದಿಗಳಿಂದ ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ.













