ಮೈಸೂರು ಮುಡಾ ಕಛೇರಿಯಲ್ಲಿ ರಾತ್ರಿಯಿಡೀ ದಾಖಲೆಗಳ ಶೋಧಕಾರ್ಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಬೆಳಿಗ್ಗೆ ನಂತರದಲ್ಲಿ ಮೈಸೂರು ಮುಡಾದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಲಾಶ್ ಗೆ ಮುಂದಾಗಿದ್ದಾರೆ.

ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ಮುಡಾ ಕಚೇರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಡೆಡ್‌ಲೈನ್ ಹತ್ತಿರಕ್ಕೆ ಬರ್ತಿದ್ದಂತೆ ಅಧಿಕಾರಿಗಳಲ್ಲಿ ಟೆನ್ಷನ್ ಹೆಚ್ಚಾದಂತೆ ಕಾಣುತ್ತಿದೆ. ಹೀಗಾಗಿ ಬೆಳಗ್ಗೆಯಿಂದ ನಿರಂತರ ಶೋಧ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಮುಡಾ ಹಗರಣದ ತನಿಖಾ ವರದಿಯನ್ನು ಜನವರಿ 25 ರಂದು ಹೈಕೋರ್ಟ್ ಗೆ ಸಲ್ಲಿಸಲು ಡೆಡ್ ಲೈನ್ ಇರುವ ಹಿನ್ನಲೆ ತೀವ್ರ ಶೋಧಕಾರ್ಯಕ್ಕೆ ಮುಂದಾಗಿದ್ದು,ರಾತ್ರಿ ಊಟ ತರಿಸಿಕೊಂಡು ಅಲ್ಲೆ ಅಧಿಕಾರಿಗಳು ಮುಡಾದಲ್ಲೇ ಊಟ ಮಾಡಿದ್ದಾರೆ.
20-11-2020 ರಂದು ನಡೆದ ಸಭೆಯ ನಡಾವಳಿ ಕುರಿತು ಮಾಹಿತಿ ಸಂಗ್ರಹ ಮಾಡುವ ಸಲುವಾಗಿ ಈ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಂದಿನ ಸಭೆಯ ಸಿಸಿಟಿವಿ, ಆಡಿಯೋ, ಲಾಗ್ ಬುಕ್ ಸೇರಿ ಹಲವು ವಸ್ತುಗಳ ಸಂಗ್ರಹಕ್ಕೆ mundaagiddaare.