
ಮೈಸೂರು ಮುಡಾ ಕೇಸ್‌ನಲ್ಲಿ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ರಾಯಚೂರು ಸಂಸದ ಜಿ.ಕುಮಾರನಾಯ್ಕ್ ವಿಚಾರಣೆ ಮಾಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿಗೆ ಭೂ ಪರಿವರ್ತನೆ ಮಾಡುವ ವೇಳೆ ಮೈಸೂರಿನ ಡಿಸಿ ಆಗಿದ್ದ ಕುಮಾರನಾಯ್ಕ್, ಸದ್ಯ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಲೋಕಾಯುಕ್ತರು ಮುಡಾ ಪ್ರಕರಣ ತನಿಖೆ ಚುರುಕುಗೊಳಿಸಿದ್ದಾರೆ.
ಹೈಕೋರ್ಟ್ ಆದೇಶದ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ ಉದೇಶ್ ತೀವ್ರ ವಿಚಾರಣೆ ನಡೆಸಿದ್ದಾರೆ. ಇತ್ತ ಮೈಸೂರಿನಲ್ಲಿ ತನಿಖೆ ಚುರುಕು ಪಡೆದುಕೊಂಡಿದ್ರೆ, ಅತ್ತ ಲೋಕಾಯುಕ್ತರು ಕೂಡ ತನಿಖೆ ನಡೆಸುತ್ತಿದ್ದಾರೆ.












