ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ( Lokayukta ) ಕರ್ನಾಟಕದ ವಿವಿಧೆಡೆ ಭ್ರಷ್ಟರ ಬೇಟೆ ಆರಂಭಿಸಿದ್ದಾರೆ. ಬೆಂಗಳೂರು ನಗರ ( Bangalore ) ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಒಟ್ಟು ಎಂಟು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. BBMP ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ , ಕೋಲಾರ ಜಿಲ್ಲೆಯ ಬೆಸ್ಕಾಂ AEEG. ನಾಗರಾಜ್, ಕರುಬುರುಗಿ ಹೆದ್ದಾರಿ ಅಭಿವೃದ್ಧಿ ಯೂನಿಟ್ ಅಧಿಕಾರಿ ಜಗನ್ನಾಥ್, ದಾವಣಗೆರೆಯ ಆಹಾರ ಸುರಕ್ಷತೆ ವಿಭಾಗದ ಅಧಿಕಾರಿ ಜಿ.ಎಸ್. ನಾಗರಾಜು ಹಾಗೂ ತುಮಕೂರು ಜಿಲ್ಲೆಯ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್, ಬಾಗಲಕೋಟೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಫ್‌ಡಿಎ ಮಲ್ಲಪ್ಪ ಸಾಬಣ್ಣ, ವಿಜಯಪುರ ಹೌಸಿಂಗ್ ಬೋರ್ಡ್ ಎಫ್‌ಡಿಎ ಶಿವಾನಂದ್ ಶಿವಶಂಕರ್ ಕಂಬಾವಿ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ..

ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ವೇಳೆ ಡಿಪಿಎಆರ್ ಚೀಫ್ ಇಂಜಿನಿಯ ನಂಜುಡಪ್ಪ ಮನೆಯಲ್ಲಿ ಅಕ್ಕಸಾಲಿಗರನ್ನ ಕರೆಸಿ
ಚಿನ್ನ ಪರಿಶೀಲನೆ ನಡೆಸಿದ್ದಾರೆ.