
ರಾಜ್ಯದಲ್ಲಿ 10 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, 10 ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ. ಬೆಂಗಳೂರು ಬೆಸ್ಕಾಂ ಅಧೀಕ್ಷಕ ಅಭಿಯಂತರರಾದ ಲೋಕೇಶ್ ಬಾಬು ಬಳಿ 6 ಕೋಟಿ 70 ಲಕ್ಷ 95,000 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ.

ಬೆಂಗಳೂರಿನ ಕಂದಾಯ ನಿರೀಕ್ಷಕನಾಗಿರುವ ಎಸ್.ಜಿ.ಸುರೇಶ್ ಮನೆಯಲ್ಲಿ 1 ಕೋಟಿ 82 ಲಕ್ಷದ 61,215 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್‌ಗೆ ಸೇರಿದ 6 ಕೋಟಿ 63 ಲಕ್ಷದ 90 ಸಾವಿರ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ.
ಬೆಂಗಳೂರಿನ ತೆರಿಗೆ ನಿರೀಕ್ಷಕ ಆಗಿರುವ ಕೃಷ್ಣಪ್ಪ ಅವರ ಬಳಿ 2 ಕೊಟಿ 21 ಲಕ್ಷದ 29,551 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ. ಇನ್ನು ಬೆಂಗಳೂರಿನ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಆಗಿರುವ ಏಕೇಶ್ ಬಾಬು ಬಳಿ 7 ಕೋಟಿ 92 ಲಕ್ಷ ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಮಾಡಲಾಗಿದೆ.
ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ (ಸಶಸ್ತ್ರ) DySP ಆಗಿರುವ ನಂಜುಂಡಯ್ಯ ಮನೆ ಬಳಿ 12 ಕೋಟಿ 53 ಲಕ್ಷದ 225 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ. ಗದಗ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದಲ್ಲಿ SDA ಲಕ್ಷ್ಮಣ ಕೊನೆರಪ್ಪ ಕರ್ಣಿ ಬಳಿ 2 ಕೋಟಿ 1 ಲಕ್ಷದ 81 ಸಾವಿರ ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರಾಗಿರುವ ರಾಮಪ್ಪ ಮನೆಯಲ್ಲಿ 3 ಕೋಟಿ 58 ಲಕ್ಷದ 46 ಸಾವಿರ ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ. ಕೊಪ್ಪಳದ ಅಬಕಾರಿ ನಿರೀಕ್ಷಕ ರಮೇಶ್ ಬಿ ಅಗಡಿ ಮನೆಯಲ್ಲಿ 1 ಕೋಟಿ 61 ಲಕ್ಷದ 23,175 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ. ಅಂತಿಮವಾಗಿ ಹಿರಿಯೂರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್ ಸುರೇಶ್ ಮನೆಯಲ್ಲಿ 3 ಕೋಟಿ 50 ಲಕ್ಷದ 14,417 ರೂಪಾಯಿ ಮೌಲ್ಯದ ಚರ & ಸ್ಥಿರ ಆಸ್ತಿ ಪತ್ತೆ ಆಗಿದೆ.