• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

S.M ಕೃಷ್ಣ ನಡೆದು ಬಂದ ಹಾದಿ ಹೇಗಿತ್ತು..? ರಾಜಕೀಯ ಸಾಧನೆಗಳು ಏನು..?

ಪ್ರತಿಧ್ವನಿ by ಪ್ರತಿಧ್ವನಿ
December 11, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ ಎಸ್‌.ಎಂ ಕೃಷ್ಣ, 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಗೆ ಪದಾರ್ಪಣೆ ಮಾಡಿದ್ರು. ಸುಮಾರು 50 ವರ್ಷಗಳ ಕಾಲ ವಿವಿಧ ಹಂತಗಳಲ್ಲಿ ಆಡಳಿತ ನಿರ್ವಹಣೆ ಮಾಡಿದ್ದಾರೆ. ವಯಸ್ಸಿನ ಕಾರಣಕ್ಕೆ ಯುಪಿಎ-2 ಅವಧಿಯಲ್ಲಿ ಮಂತ್ರಿ ಸ್ಥಾನದಿಂದ ಕೈಬಿಡಲಾಗಿತ್ತು. ವಿಧಾನಸಭೆ, ವಿಧಾನ ಪರಿಷತ್‌, ಲೋಕಸಭೆ, ರಾಜ್ಯಸಭೆಗಳ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಎಸ್‌.ಎಂ ಕೃಷ್ಣ ಕೂಡ ಒಬ್ಬರು.

ADVERTISEMENT

ಕೇಂದ್ರ ಸರ್ಕಾರದಲ್ಲಿ ರಾಜ್ಯಖಾತೆ ಸಚಿವರಾಗಿ, ರಾಜ್ಯದಲ್ಲಿ ಕ್ಯಾಬಿನೆಟ್‌ ಸಚಿವರಾಗಿ, ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಸ್ಪೀಕರ್‌ ಆಗಿ, ರಾಜ್ಯದ ಮುಖ್ಯಮಂತ್ರಿ ಆಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆಡಳಿತ ನಡೆಸಿದ ಎಲ್ಲಾ ಖಾತೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶ ಸ್ಥಾಪನೆ, ಬೆಂಗಳೂರು ಐಟಿ ಹಬ್‌ ಆಗಿ ಬೆಳೆಸಲು ಆದ್ಯತೆ ನೀಡಿದ್ದು ಎಸ್‌.ಎಂ ಕೃಷ್ಣ ಅವರ ದೂರದೃಷ್ಟಿಗೆ ಸಾಕ್ಷಿ ಎನ್ನಬಹುದು.

ಉತ್ತಮ ಆಡಳಿತಗಾರ ಎನ್ನುವುದನ್ನು ಎಸ್‌.ಎಂ ಕೃಷ್ಣ ತನ್ನ ಆಡಳಿತಾವಧಿಯಲ್ಲಿ ಸಾಧಿಸಿ ತೋರಿಸಿದ್ರು. ಚತುರ ಮಾತುಗಾರನಾಗಿದ್ದ ಎಸ್‌.ಎಂ ಕೃಷ್ಣ, ಬಹುತೇಕ ಗ್ರಾಂಥಿಕ ಭಾಷೆಯನ್ನು ಬಳಸುತ್ತಿದ್ದ ಎಸ್‌.ಎಂ ಕೃಷ್ಣ, ಎಂದೂ ಎದುರಾಳಿಗಳ ವಿಚಾರದಲ್ಲಿ ಕೀಳು ಮಟ್ಟದ ಪದ ಪ್ರಯೋಗ ಮಾಡಿದವರಲ್ಲ. ರಾಜಕಾರಣದಲ್ಲಿ ಸ್ಪಷ್ಟ ನಿಲುವಿನ ದಿಟ್ಟ ರಾಜಕಾರಣಿ ಆಗಿದ್ದ ಎಸ್‌.ಎಂ ಕೃಷ್ಣ, ಟೆನ್ನಿಸ್‌ ಆಟದ ಜೊತೆ ಜೊತೆಗೆ ಸಂಗೀತ ಪ್ರೇಮಿಯಾಗಿದ್ದರು.

ಬೆಂಗಳೂರು ನಗರಕ್ಕೆ ಹೊಸ ಬ್ರ್ಯಾಂಡ್‌ ಇಮೇಜ್‌ ಕೊಡಿಸಿದ ಎಸ್‌.ಎಂ.ಕೃಷ್ಣ, ಭಾರತದ ‘ಸಿಲಿಕಾನ್‌ ಸಿಟಿ’ಯಾಗಿ ಬೆಂಗಳೂರು ಪರಿವರ್ತನೆ ಮಾಡಿದ ಹರಿಕಾರ ಎನ್ನಬಹುದು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನ ಬೀಜ ಬಿತ್ತಿದ್ದ ಎಸ್‌.ಎಂ.ಕೃಷ್ಣ, ಹೈದ್ರಾಬಾದ್‌ ನಗರದ ಜೊತೆಗೆ ಐಟಿ-ಬಿಟಿಯಲ್ಲಿ ಪೈಪೋಟಿಗೆ ಇಳಿದ ಬೆಂಗಳೂರು, ಹೈದ್ರಾಬಾದನ್ನು ಹಿಂದಿಕ್ಕಿ ಐಟಿ-ಬಿಟಿ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಏರಲು ಸಹಕಾರಿ ಆಗಿದ್ದರು. ಬೆಂಗಳೂರಿನ ಬೆಳವಣಿಗೆಗೆ ಹೊಸ ರೂಪವನ್ನು ನೀಡಿದ್ದ ಎಸ್‌.ಎಂ.ಕೃಷ್ಣ, ಐಟಿ ಪಾರ್ಕ್‌ಗಳ ಜೊತೆಗೆ ವಾರ್ಡ್‌ಗೊಂದು ಪಾರ್ಕ್‌ಗೂ ಆದ್ಯತೆ ನೀಡಿದ್ದರು. ವಿಕಾಸ ಸೌಧ, ಕೆಂಪೇಗೌಡ ಏರ್‌ಪೋರ್ಟ್‌, ನಮ್ಮ ಮೆಟ್ರೋ ನಿರ್ಮಾಣಕ್ಕೆ ಎಸ್‌.ಎಂ.ಕೃಷ್ಣ ಶ್ರಮ ಅತ್ಯಧಿಕ.

Tags: 1962Born in 1932 in SomanahalliCabinet Minister in the State and Cabinet MinisterLok Sabha and Rajya Sabha.Maddur Talukpath of S.M Krishna.Silicon City' of India.SM Krishna Death
Previous Post

10 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ..ಏನೇನು ಸಿಕ್ತು..?

Next Post

ಎಸ್‌.ಎಂ ಕೃಷ್ಣ ಪತ್ನಿಗೆ ಪ್ರಧಾನಿ ಕಳುಹಿಸಿದ ಶೋಕ ಸಂದೇಶ ಪತ್ರ ತಲುಪಿಸಿದ ಜೋಶಿ..

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post

ಎಸ್‌.ಎಂ ಕೃಷ್ಣ ಪತ್ನಿಗೆ ಪ್ರಧಾನಿ ಕಳುಹಿಸಿದ ಶೋಕ ಸಂದೇಶ ಪತ್ರ ತಲುಪಿಸಿದ ಜೋಶಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada