ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮೊದಲನೇ ಹಂತದ ಮತದಾನ ಇನ್ನೇನು ಮುಕ್ತಾಯ ಹಂತ ತಲುಪಿದೆ. 21 ರಾಜ್ಯಗಳ, 102 ಸ್ಥಾನಗಳಿಗೆ ಮತದಾನ ನಡೀತಾಯಿದ್ದು, ಒಟ್ಟಾರೆ 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಪ್ರಮುಖ ರಾಜ್ಯಗಳಲ್ಲಿ ಈ ದಿನ ಮತದಾನ ನಡೆಯುತ್ತಿದೆ. ಮತಗಟ್ಟೆ ಸುತ್ತಮುತ್ತ ಹದ್ದಿನ ಕಣ್ಣಿಡಲಾಗಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು ಎಲ್ಲಾ 39 ಲೋಕಸಭಾ ಕ್ಷೇತ್ರ, ರಾಜಸ್ಥಾನದ 25 ಸ್ಥಾನಗಳ ಪೈಕಿ 12, ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 8 ಸ್ಥಾನಕ್ಕೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ 6 ಸ್ಥಾನಕ್ಕೆ, ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಉತ್ತರಾಖಂಡದ ಎಲ್ಲಾ 5 ಸ್ಥಾನಕ್ಕೆ, ಅಸ್ಸಾಂ 14 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಬಿಹಾರ ರಾಜ್ಯದಲ್ಲಿ ಒಟ್ಟು 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮತದಾನ ನಡೀತಾಯಿದೆ. ಪಶ್ಚಿಮ ಬಂಗಾಳ ರಾಜ್ಯದ 42 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ, ಅರುಣಾಚಲ ಪ್ರದೇಶದ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ, ಮಣಿಪುರದಲ್ಲಿ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ ಚುನಾವಣೆ ನಡೀತಾಯಿದೆ. ಹಾಗೇ ಮೇಘಾಲಯದ 2 ಸ್ಥಾನಗಳ ಪೈಕಿ ಎಲ್ಲಾ 2, ಛತ್ತೀಸ್ಘಡದ 11 ಸ್ಥಾನಗಳ ಪೈಕಿ 1 ಸ್ಥಾನಕ್ಕೆ, ಮಿಜೋರಾಂ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ನಾಗಾಲ್ಯಾಂಡ್ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ಸಿಕ್ಕಿಂನ ಎಲ್ಲಾ 1 ಸ್ಥಾನಕ್ಕೆ, ತ್ರಿಪುರದ 2 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಎಲೆಕ್ಷನ್ ಸಾಗಿದೆ. ಜಮ್ಮು ಮತ್ತು ಕಾಶ್ಮೀರದ 5 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವು ಭಾರಿ ಭದ್ರತೆಯಿಂದ ನಡೆಯುತ್ತಿದೆ. ಇನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಎಲ್ಲಾ 1 ಸ್ಥಾನ, ಲಕ್ಷದ್ವೀಪದ ಎಲ್ಲಾ 1 ಸ್ಥಾನಕ್ಕೆ, ಪುದುಚೇರಿಯ ಒಂದು ಕ್ಷೇತ್ರಕ್ಕೆ ವೋಟಿಂಗ್ ಸಾಗ್ತಿದೆ.
HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ. ನೌಕರರ ಪ್ರಮುಖರ ಜತೆ ಅನ್ನಪೂರ್ಣದೇವಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹೆಚ್ಡಿಕೆ...
Read moreDetails





