ನವದೆಹಲಿ (Newdehli): ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಇಂದು 125 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಹಲವು ಗಂಟೆಗಳ ಮಹತ್ವದ ಚರ್ಚೆಯ ನಂತರ, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ವಾರಣಾಸಿ, ಗಾಂಧಿನಗರ ಮತ್ತು ಲಕ್ನೋದಂತಹ ಪ್ರಮುಖ ಸ್ಥಾನಗಳನ್ನು ಒಳಗೊಂಡಂತೆ 125 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ (Narendra modi), ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ (JPNadda), ಗೃಹ ಸಚಿವ ಅಮಿತ್ ಶಾ (Amit Shah), ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ CEC ಯಲ್ಲಿ 550 ಕ್ಕೂ ಅಧಿಕ ಸದಸ್ಯರಿದ್ದು, ನಿನ್ನೆ ಸಂಜೆಯವರೆಗೂ ಗಂಟೆಗಟ್ಟಲೆ ಸಭೆ ನಡೆದಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಹೊಸ ಮುಖಗಳನ್ನು ಕಣಕ್ಕೆ ತರಲು, ಹಲವಾರು ಹಾಲಿ ಸಂಸದರನ್ನು ಕೈಬಿಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಜೊತೆಗೆ ಅನೇಕ ರಾಜ್ಯಸಭಾ ಸಂಸದರನ್ನು ಕಣಕ್ಕಿಳಿಸಬಹುದು. ಕಳಪೆ ಗೆಲುವು, ಜನರೊಂದಿಗೆ ಕಳಪೆ ಸಂಪರ್ಕ ಮತ್ತು ವಯಯಸ್ಸಿನ ಕಾರಣ ಹಾಗೂ ಆಯಾ ಕ್ಷೇತ್ರಗಳಲ್ಲಿ ಬದಲಾದ ಸಾಮಾಜಿಕ ಮತ್ತು ಜಾತಿ ಸಮೀಕರಣಗಳಿಂದಾಗಿ ಈ ಬಾರಿ ಪಕ್ಷವು ಒಟ್ಟು ಹಾಲಿ ಸಂಸದರ ಪೈಕಿ ಶೇ. 25-30 ರಷ್ಟು ಮಂದಿಗೆ ಗೇಟ್ ಪಾಸ್ ನೀಡುತ್ತದೆ ಎಂದು ಮೂಲಗಳು ವಿವರಿಸಿವೆ.
ವಾರಣಾಸಿಯಿಂದ ಮೋದಿ, ಗುಜರಾತ್ನ ಗಾಂಧಿನಗರದಿಂದ ಶಾ, ಲಕ್ನೋದಿಂದ ರಾಜನಾಥ್ ಸಿಂಗ್ ಮುಂದುವರಿಕೆಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. ನಾಗ್ಪುರದಿಂದ ನಿತಿನ್ ಗಡ್ಕರಿ, ಅಮೇಠಿಯಿಂದ ಸ್ಮೃತಿ ಇರಾನಿ, ಹಮೀರ್ಪುರದಿಂದ ಅನುರಾಗ್ ಠಾಕೂರ್, ಧಾರವಾಡದಿಂದ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಬಿಜೆಪಿ ನಾಯಕರಾದ ರವಿ ಕಿಶನ್ ಗೋರಖ್ಪುರದಿಂದ, ಸುಬ್ರತ್ ಪಾಠಕ್ ಕನೌಜ್ನಿಂದ ಮತ್ತು ಸಾಧ್ವಿ ನಿರಂಜನ್ ಫತೇಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಎನ್ಡಿಎ 400ಕ್ಕೂ ಹೆಚ್ಚು ಸ್ಥಾನಗಳ ಮೇಲೆ ಕಣ್ಣಟ್ಟಿದೆ. ಬಿಜೆಪಿ ಮಾತ್ರ 370 ಸ್ಥಾನಗಳನ್ನು ದಾಟಲಿದೆ ಎಂದು ಬಿಂಬಿಸುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಗೆಲುವಿನ ಸಾಮರ್ಥ್ಯ, ಶುದ್ಧ ರಾಜಕೀಯ ಹಿನ್ನೆಲೆ ಮತ್ತು ಜನರೊಂದಿಗೆ ಇಂಟರ್ಫೇಸ್ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ ಎನ್ನಲಾಗಿದೆ.
#newdelhi #mpelection #bjp #narendramodi #modi