ಆನೇಕಲ್‌ನಲ್ಲಿ ಕಾಂಗ್ರೆಸ್ ಮುಖಂಡನೋರ್ವ ಪೋಲಿಸ್ ಹೆಡ್ ಕಾನ್ಸ್‌ಟೇಬಲ್‌ಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಶಾಸಕ ಬಿ. ಶಿವಣ್ಣ ಆಪ್ತ ಬೆಸ್ತಮಾನಹಳ್ಳಿ ಯಲ್ಲಪ್ಪ ಎಂಬಾತ ಗೂಂಡಾಗಿರಿ ಮೆರೆದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಅಶೋಕ್ ಹಲ್ಲೆಗೊಳಗಾದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ಆನೇಕಲ್ ಪಟ್ಟಣದ ರಾಮದೇವರ ಸರ್ಕಲ್‌ನಲ್ಲಿ ಹಲ್ಲೆ ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಕಾರು ಪಾರ್ಕ್ ಮಾಡಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಅಶೋಕ್‌ಗೆ ಬಾರಿಸಿದ್ದಾರೆ. ಏನೋ ಗುರಾಯಿಸುತ್ತಿಯಾ..? ಎಂದ ಯಲ್ಲಪ್ಪ ಪ್ರಶ್ನಿಸಿದ್ದಾನೆ. ನಾನು ನಿನ್ನನ್ನು ಗುರಾಯಿಸಿಲ್ಲ ಎಂದು ಅಶೋಕ್ ಮುಂದೆ ಸಾಗಿದ ವೇಳೆ ಹಿಂಬದಿಯಿಂದ ಬಂದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಕೈಗೆ ಸಿಕ್ಕ ಹಾಲಿನ ಟ್ರೆನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಹೆಡ್ ಕಾನ್‌ಸ್ಟೇಬಲ್ ಅಶೋಕ್ ತಲೆಗೆ ಗಂಭೀರ ಗಾಯವಾಗಿದ್ದು, ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಸ್ಥಳೀಯರು. ಹಲ್ಲೆ ಮಾಡಿದ ಯಲ್ಲಪ್ಪನನ್ನು ಆನೇಕಲ್ ಪೊಲೀಸರು ವಶಕ್ಕೆ ಪಡೆದ ವಿಚಾರಣೆ ಮಾಡಿದ್ದಾರೆ. ಆನೇಕಲ್‌ನಲ್ಲಿ ಪುಡಿ ರೌಡಿಗಳ ಗೂಂಡಾಗಿರಿ ಮಿತಿಮೀರಿದೆ. ಇತ್ತೀಚಿಗೆ ಕೊಲೆ ದರೋಡೆ ಮಿತಿ ಮೀರುತ್ತಿವೆ. ಪೊಲೀಸ್ರ ಭಯವೇ ಇಲ್ಲದಂತಾಗಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.






