ನವದೆಹಲಿ : ವಂದೇ ಭಾರತ್ ರೈಲನ್ನು Vande Bharat train)ಓಡಿಸಲು ಲೋಕೋ ಪೈಲೆಟ್ಗಳು (ರೈಲ್ವೇ ಚಾಲಕ) (Loco pilots Railway driver)ನಾ ಮುಂದು ತಾ ಮುಂದು ಅಂತಾ ಗುದ್ದಾಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೋಕೋ ಪೈಲೆಟ್ಗಳ ನಡುವೆ ಘರ್ಷಣೆ ನಡೆದಿದೆ ಎಂಬ ವಿಡಿಯೋ ಬಗೆಗಿನ ಸತ್ಯಾಂಶ ಇದೀಗ ಬಹಿರಂಗಗೊಂಡಿದೆ. ಹೌದು.. ವಿವಾದದ ನಡುವೆಯೂ ಸೆ.2ರಿಂದ ರಾಜಸ್ತಾನದ ಉದಯಪುರ ಮತ್ತು ಆಗ್ರಾ ನಡುವೆ ಹೊಸದಾಗಿ ವಂದೇ ಭಾರತ್ ರೈಲನ್ನು ಆರಂಭಿಸಲಾಗಿದೆ.
The loco pilots are fighting to drive Vande Bharat. Insane. pic.twitter.com/aMfnoTbtxs
— Narundar (@NarundarM) September 7, 2024
ವಂದೇ ಭಾರತ್ ಎಕ್ಸಪ್ರೆಸ್ನ (Vande Bharat Express)ಕಾರ್ಯಾಚರಣೆ ಬಗ್ಗೆ ವಿವಿಧ ವಿಭಾಗಗಳ ರೈಲ್ವೆ ನೌಕರರು ವಿರೋಧಿಸಿದ್ದರು. ವಿರೋಧದ ನಡುವೆಯೂ ವಂದೇ ಭಾರತ್ ಕಾರ್ಯಾಚರಣೆಗೆ ಇಳಿದ ಕಾರಣ ನೌಕರರು ಲೋಕೋ ಪೈಲೆಟ್ಗಳನ್ನು ಪ್ರಶ್ನಿಸಲು ಮುಂದಾಗಿದ್ದಾರೆ.ಈ ವೇಳೆ ಲೋಕೋ ಪೈಲೆಟ್ಗಳನ್ನು ತಮ್ಮ ಕ್ಯಾಬಿನ್ ಬಂದ್ ಮಾಡಲು ಮುಂದಾದಾಗ ಘರ್ಷಣೆ ಉಂಟಾಗಿದೆ.
ಕ್ಯಾಬಿನ್ ಒಳಗೆ ನುಗ್ಗಲು ಪ್ರಯತ್ನಿಸಿದ ರೈಲ್ವೇ ನೌಕರರು ಕೆಲ ಲೋಕೋ ಹಾಗೂ ಸಹ ಲೋಕೋ ಪೈಲೆಟ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.