ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕಾಯಿಲೆಯನ್ನು ಹತ್ತೋಟಿಗೆ ತರಲು ದೇಶದ ಹಲವೆಡೆ ಲಾಕ್‌ಡೌನ್ ಹೇರಿಕೆಯಾಗಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಇಲಾಖೆಯ ವರದಿ ಪ್ರಕಾರ ಶುಕ್ರವಾರ ಬೆಳ್ಳಗ್ಗೆ 32,943 ಹೊಸ ಸೋಂಕಿತರು ಪತ್ತೆಯಾಗಿದ್ದು 2019ರ ಬಳಿಕ ಒಂದೇ ದಿನ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಎಂದು ತಿಳಿದು ಬಂದಿದೆ.
ಚೀನಾದ ಝೇಂಗ್‌ಝೌ ಪ್ರದೇಶದಲ್ಲಿ 5 ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿದ್ದು ಕಠಿಣ ನಿರ್ಬಂಧ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದ್ದು ಪೊಲೀಸರು ಹಾಗೂ ಕಾರ್ಖಾನೆಯ ನೌಕರರು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದ್ದು ಪರಿಸ್ಥಿತಿಯನ್ನು ಹತ್ತೋಟಿಗೆ ತರಲು ಲಾಠಿ ಪ್ರಹಾರವನ್ನ ನಡೆಸಲಾಗಿದೆ.